ಕುವೈತ್ : ಎರಡು ಬಸ್ ಗಳು ಮುಖಾಮುಖಿ ಢಿಕ್ಕಿ ಹೊಡೆದ ಕಾರಣ 15 ಜನ ತೈಲ ಕಂಪೆನಿಗಳ ಕಾರ್ಮಿಕರು ಮೃತಪಟ್ಟ ಘಟನೆ ದಕ್ಷಿಣ ಕುವೈತ್ ನಲ್ಲಿ ಭಾನುವಾರ ಸಂಭವಿಸಿದೆ.
ಇವರೆಲ್ಲರೂ ಬರ್ಗನ್ ಡ್ರಿಲ್ಲಿಂಗ್ ನಲ್ಲಿ ಕೆಲಸ ಮಾಡುತ್ತಿದ್ದು, ಮೃತರ ಪೈಕಿ 7 ಮಂದಿ ಭಾರತೀಯರು, 5 ಜನ ಈಜಿಪ್ಟಿಯನ್ನರು ಹಾಗೂ ಇತರ ಮೂವರು ಪಾಕಿಸ್ತಾನಿಯರು ಎಂದು ಸರಕಾರಿ ಕುವೈತ್ ಆಯಿಲ್ ಕಂಪೆನಿ ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ ಈ ಅಫಘಾತದಲ್ಲಿ ಇಬ್ಬರು ಭಾರತೀಯರು ಹಾಗೂ ಒಬ್ಬ ಕುವೈತ್ ಪ್ರಜೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ