Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರಿಗಾಗಿ ಹಾತೊರೆಯುವ ಸುಂದರಿಯರು: ನಗರ ಎಲ್ಲಿದೆ ಗೊತ್ತಾ?

ಪುರುಷರಿಗಾಗಿ ಹಾತೊರೆಯುವ ಸುಂದರಿಯರು: ನಗರ ಎಲ್ಲಿದೆ ಗೊತ್ತಾ?
ಬೆಂಗಳೂರು , ಗುರುವಾರ, 25 ಏಪ್ರಿಲ್ 2019 (12:56 IST)
ವಿಶ್ವದಲ್ಲಿ ಪುರುಷರಿಗಾಗಿ ಹಂಬಲಿಸುವ ಸಂದರಿಯರ ದಂಡೇ ಇದೆ. ಈ ಪ್ರದೇಶದಲ್ಲಿ ಪುರುಷರೇ ಇರುವುದಿಲ್ಲ. ಆದರೆ, ಪಟ್ಟಣದ ತುಂಬಾ ಸುಂದರಿಯರ ಜನಸಂಖ್ಯೆ ಕಾಣುತ್ತದೆ. ಇಂತಹ ಪಟ್ಟಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಆಗ್ನೇಯ ಬ್ರೆಜಿಲ್‌ನ ನೊಯಿಯಾ ಡೊ ಕಾರ್ಡಿಯೊರೊ ಪಟ್ಟಣದಲ್ಲಿ 600 ಮಹಿಳೆಯರಿದ್ದಾರೆ, ಪ್ರಮುಖವಾಗಿ 20 ಮತ್ತು 35 ರ ವಯಸ್ಸಿನವರಾಗಿದ್ದಾರೆ. ಅದರಲ್ಲಿ ಕೆಲವರು ವಿವಾಹಿತರು, ಅವರ ಗಂಡಂದಿರು ಮನೆಯಿಂದ ಕೆಲಸ ಮಾಡಲು ಬೇರೆ ನಗರಗಳಿಗೆ ಬಲವಂತವಾಗಿ ಉದ್ಯೋಗಕ್ಕಾಗಿ ತೆರಳಿದ್ದು  ವಾರಾಂತ್ಯಕ್ಕೆ ಮಾತ್ರ ಮರಳಬಹುದಂತೆ.
 
18 ನೇ ವಯಸ್ಸಿನಲ್ಲಿಯೇ ಗಂಡುಮಕ್ಕಳನ್ನು ದೂರ ಕಳುಹಿಸಲಾಗುತ್ತದೆ ಮತ್ತು ರಿಮೋಟ್ ಪ್ರದೇಶದಲ್ಲಿರುವ ಪಟ್ಟಣದಲ್ಲಿ ಪೂರ್ಣ ಸಮಯ ಬದುಕಲು ಇತರ ಪುರುಷರಿಗೆ ಅವಕಾಶವಿಲ್ಲ.
 
1890ರ ದಶಕದಲ್ಲಿ ಒತ್ತಾಯಪೂರ್ವಕವಾಗಿ ವಿವಾಹವಾದ ಪತಿಯನ್ನು ಯುವತಿಯೊಬ್ಬಳು ತೊರೆದಾಗ ಆಕೆಯನ್ನು ಕ್ಯಾಥೋಲಿಕ್ ಚರ್ಚ್‌ನಿಂದ ಬಹಿಷ್ಕಾರ ಹಾಕಲಾಗಿತ್ತು 
 
ಹೆಚ್ಚು ಹೆಚ್ಚು ಏಕೈಕ ಮಹಿಳೆಯರು ಮತ್ತು ಏಕಾಂಗಿಯಾಗಿ ಬಾಳುತ್ತಿರುವ ತಾಯಂದಿರು ನಿಧಾನವಾಗಿ ಸಮುದಾಯವನ್ನು ಸೇರಿಕೊಂಡರು. ಅವರ ಜೀವನದಲ್ಲಿ ಪುರುಷರು ಹಲವಾರು ಬಾರಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಕಟ್ಟುನಿಟ್ಟಾದ ಮಹಿಳಾ ವಾತಾವರಣದಲ್ಲಿ ಬದುಕುವ ಬಯಕೆಯನ್ನು ಮಹಿಳೆಯರು ಕಂಡುಕೊಂಡರು.
webdunia
ಆದಾಗ್ಯೂ, ಈ ಪ್ರದೇಶದಲ್ಲಿ ಯುವತಿಯರು ತುಂಬಾ ಸುಂದರಿಯರು. ಈಗ ಸಮುದಾಯದಲ್ಲಿ ಯುವತಿಯರಿಗೆ ಪತಿಯನ್ನು ಹುಡುಕಲು ಸುಲಭವಾಗುವಂತೆ ಕೆಲ ಕಾನೂನುಗಳನ್ನು ಸಡಿಲಿಸಲು ಸಿದ್ದತೆ ನಡೆಸಿದ್ದಾರೆ. 
 
ನಾವು ಪ್ರೀತಿಯಲ್ಲಿ ತೇಲಾಡುವ ಮತ್ತು ಮದುವೆಯಾಗಲು ಎಲ್ಲಾ ಕನಸು ಕಾಣುತ್ತೇವೆ. ಆದರೆ, ಪತಿಗಾಗಿ ಹುಡುಕಲು ನಗರಗಳಿಗೆ ತೆರಳಲು ಬಯಸುವುದಿಲ್ಲ. ನಾವು ನಮ್ಮ ಪಟ್ಟಣದಲ್ಲಿಯೇ ವಾಸಿಸಲು ಬಯಸುತ್ತೇವೆ ಎಂದು 23 ವರ್ಷದ ಯುವತಿ ನೆಲ್ಮಾ ಫರ್ನಾಂಡಿಸ್ ತಿಳಿಸಿದ್ದಾರೆ.
 
ತಮ್ಮ ಜೀವನವನ್ನು ಬಿಟ್ಟು ನಮ್ಮವನಾಗಿ ಬರುವ ಪುರುಷರನ್ನು ನಾವು ಒಪ್ಪಿಕೊಳ್ಳುತ್ತೇವೆ.  ಆದರೆ, ಮೊದಲು ಅವರು ನಮ್ಮ ನಿಯಮಗಳ ಪ್ರಕಾರ ಅವರು ಜೀವನ ಸಾಗಿಸಬೇಕು ಎನ್ನುವುದೇ ನಮ್ಮ ನಿಯಮವಾಗಿದೆ ಎಂದು ಮನದಾಳದ ಮಾತನ್ನು ಹೇಳಿದ್ದಾರೆ.
webdunia
ಪಟ್ಟಣ ಸ್ಥಾಪಕ ಮಾರಿಯಾ ಸೆನ್ಹೊರಿನ್ಹಾ ಡಿ ಲಿಮಾ ಮತ್ತು ಅವರ ಕುಟುಂಬವನ್ನು  1891 ರಲ್ಲಿ ಕ್ಯಾಥೊಲಿಕ್ ಚರ್ಚ್ ಮುಂದಿನ ಐದು ತಲೆಮಾರುಗಳವರೆಗೆ ಬಹಿಷ್ಕರಿಸಿದೆ.
 
ಸ್ಥಳೀಯರಿಂದ ತಿರಸ್ಕರಿಸಲ್ಪಟ್ಟಾಗ ಸೆನ್ಹೊರಿನ್ಹಾ ಡಿ ಲಿಮಾ ಮತ್ತು ಮತ್ತೊಬ್ಬ ಮಹಿಳೆ ನಗರ ಪ್ರದೇಶಗಳಿಗೆ ತೆರಳಿದಾಗ ಅವರನ್ನು ನಡತೆಗೆಟ್ಟವರು ವೇಶ್ಯೆಯರು ಎಂದು ಪರಿಗಣಿಸಲಾಯಿತು. ಇದರಿಂದಾಗಿ ಅವರಿಗೆ ಪ್ರಪಂಚದಿಂದಲೇ ಪ್ರತ್ಯೇಕಿಸುವಂತೆ ಮಾಡಿತು.
 
1940ರಲ್ಲಿ, ಇವ್ಯಾಂಜೆಲಿಕಲ್ ಪಾದ್ರಿ, ಅನಿಸಿಯೋ ಪೆರೇರಾ ಅಲ್ಲಿನ 16 ವರ್ಷದ ಯುವತಿಯೊಬ್ಬಳನ್ನು ವಿವಾಹವಾಗಿ ನಂತರ ಸಮುದಾಯದ ಚರ್ಚ್ ಸ್ಥಾಪನೆಗೆ ಕಾರಣರಾದರು.
 
ಆದಾಗ್ಯೂ, ಅವರು ಮದ್ಯ ಸೇವನೆ, ಸಂಗೀತ ಕೇಳುವ, ತಮ್ಮ ಕೂದಲನ್ನು ಕತ್ತರಿಸಿ ಅಥವಾ ಯಾವುದೇ ರೀತಿಯ ಗರ್ಭನಿರೋಧಕವನ್ನು ಬಳಸದಂತೆ ನಿಷೇಧಿಸಿ ಕಟ್ಟುನಿಟ್ಟಾದ ಶುದ್ಧೀಕರಣ ನಿಯಮಗಳನ್ನು ವಿಧಿಸಿದರು.
webdunia
ಅನಿಸಿಯೋ 1995 ರಲ್ಲಿ ನಿಧನರಾದಾಗ, ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎನ್ನುವುದನ್ನು ಪುರುಷರು ತೀರ್ಮಾನಿಸುವುದು ಬೇಡ. ನಮ್ಮ ಮನಸ್ಸಿನಲ್ಲಿಯೇ ದೇವರಿರುವಾಗ ಚರ್ಚ್‌ಗೆ ಹೋಗಿ ಪಾದ್ರಿಯ ಎದುರಲ್ಲಿ ವಿವಾಹವಾಗುವ ಅಗತ್ಯವಿಲ್ಲ. ಹೊಸ ಕಾನೂನುಗಳನ್ನು ಜಾರಿಗೆ ತರಲು ಮಹಿಳೆಯರು ನಿರ್ಧರಿಸಿದರು. 
 
"ಮಹಿಳೆಯರು ಪುರುಷರಿಗಿಂತ ಉತ್ತಮ ಕೆಲಸಗಳನ್ನು ಮಾಡಬಲ್ಲರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ನಮ್ಮ ಪಟ್ಟಣವು ಪುರುಷರಿಗಿಂತಲೂ ಹೆಚ್ಚು ಸುಂದರ, ಹೆಚ್ಚು ಸಂಘಟಿತ ಮತ್ತು ಹೆಚ್ಚು ಸಾಮರಸ್ಯವನ್ನು ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರೋದು ಗೊತ್ತೇ ಇಲ್ಲ ಎಂದ ಯಡಿಯೂರಪ್ಪ