ನಗರದ ಪ್ರಮುಖ ಕೇಂದ್ರದಲ್ಲಿರುವ ಜನಪ್ರಿಯ ಐಸ್‌ಕ್ರೀಂ ಪಾರ್ಲರ್‌ನ ಹೊರ ಆವರಣದಲ್ಲಿ ಕಾರ್ ಬಾಂಬ್ ಸ್ಫೋಟಿಸಿದ್ದರಿಂದ 13 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐಸ್‌ಕ್ರೀಂ ಪಾರ್ಲರ್ ಮಳಿಗೆಯ ಮುಂದೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರ್‌ನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು. ರಿಮೋಟ್ ಮೂಲಕ ಸ್ಫೋಟಿಸಲಾಗಿದೆ. ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಆಚರಣೆಗೆ ಕೆಲವೇ ಕೆಲ ದಿನಗಳು ಇರುವಂತೆ ಸ್ಫೋಟ ಸಂಭವಿಸಿದೆ. ರಂಜಾನ್ ಹಬ್ಬದಲ್ಲಿ ಉಪವಾಸ ವ್ರತ ಆಚರಿಸುವ ಮುಸ್ಲಿಂ ಸಮುದಾಯದ ಜನತೆ ಸೂರ್ಯಾಸ್ತವಾಗುತ್ತಿದ್ದಂತೆ ತಮ್ಮ ಉಪವಾಸವನ್ನು ಮುರಿದು ಭೋಜನ ಸೇವಿಸಲು ರೆಸ್ಟುರಾಂಟ್‌ಗಳಿಗೆ ಆಗಮಿಸುತ್ತಾರೆ
ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ ವೀಡಿಯೊಗಳು ಸ್ಫೋಟಗೊಂಡ ಸ್ಥಳದ ಸುತ್ತಲಿನ ಬೀದಿಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು ತೋರಿಸಿದೆ. ಹಲವಾರು ಗಾಯಗೊಂಡವರು ನೆಲದ ಮೇಲೆ ಬಿದ್ದಿದ್ದರೆ, 13 ಜನರು ಸಾವನ್ನಪ್ಪಿದ್ದಾರೆ.
ಇರಾಕ್ ದೇಶದಲ್ಲಿ ಪ್ರತಿ ಬಾರಿಯೂ ರಂಜಾನ್ ಹಬ್ಬದ ಸಂದರ್ಭದಲ್ಲಿ ಹಿಂಸಾಚಾರ ನಡೆಯುವುದು ಸಾಮಾನ್ಯವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.