Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅನುಪಮ ಪ್ರೇಮ ಕಥೆ: ಕ್ಯಾನ್ಸರ್ ಪೀಡಿತ ಪತ್ನಿಗಾಗಿ, ಪತಿ ಮಾಡಿದ್ದೇನು?

ಅನುಪಮ ಪ್ರೇಮ ಕಥೆ: ಕ್ಯಾನ್ಸರ್ ಪೀಡಿತ ಪತ್ನಿಗಾಗಿ, ಪತಿ ಮಾಡಿದ್ದೇನು?
ಸರ್ಬಿಯಾ , ಬುಧವಾರ, 2 ನವೆಂಬರ್ 2016 (16:35 IST)
ಸರ್ಬಿಯಾ: ಯೆಸ್.. ದಿಜಾನಾ ಮಿಲಿಕೋವಿಕ್ 2014ರ ಮಿಸ್ ಸರ್ಬಿಯಾ ಆಗಿದ್ದ ಸುರ ಸುಂದರಿ. ನೀಳ ದೇಹ .. ಹಾಲಿನ ಬಣ್ಣ.. ಬೊಗಸೆ ಕಂಗಳು.. ಅಬ್ಬಾ ಇವಳ ವರ್ಣನೆ ಎಷ್ಟು ಮಾಡಿದರೂ ಸಾಲದು. ಆದರೆ ಇದೇ ಸುಂದರಿ ಇದೀಗ ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದಾಳೆ. ಕಿಮೋಥೆರಫಿ ಚಿಕಿತ್ಸೆಗೊಳಗಾಗಿ ತನ್ನ ಕೂದಲನ್ನು ತೆಗಿಸಿದ್ದಾಳೆ.

 
ಆದರೆ ವಿಶ್ವ ಸುಂದರಿಯಾದವಳಿಗೆ ಕೂದಲಿಲ್ಲ ಅನ್ನುವ ಕೊರಗು ಆಕೆಯದ್ದು, ಹೊರಗಡೆ ಜನ ನನ್ನ ನೋಡಿ ಏನಂತಾರೋ ಅನ್ನೋ ಆತಂಕ.. ದುಗುಡ. 
 
ಆದರೆ ಈಕೆಯ ಎಲ್ಲ ನೋವಿಗೂ, ಪ್ರತಿ ಹೆಜ್ಜೆಯಾಗಿ ಈಕೆಯ ಪತಿ ಸ್ಟೇಫನ್ ಸಾಥ್ ನೀಡಿದ್ದಾರೆ. ಸಂಗಾತಿ ಅನುಭವಿಸುತ್ತಿರುವ ಯಾತನೆ ಕಂಡು ತಾನೂ ಸಹ ಆಕೆಯಂತೆಯೇ ತಲೆ ಬೋಳು ಮಾಡಿಕೊಂಡಿದ್ದಾನೆ. ಅದು ಸ್ವತಃ ಪತ್ನಿ ದಿಜಾನಾಳೇ ಪತಿಯ ಹೇರ್ ರಿಮೂವ್ ಮಾಡಿದ್ದಾಳೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ದಿಜಾನಾ ಬೇಗನೆ ಗುಣಮುಖಳಾಗಿ ಮೊದಲಿನಂತಾಗಲಿ ಎಂಬುವುದೆ ಎಲ್ಲರ ಆಶಯ..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಅಲಿಖಿತ ವಯಸ್ಸಿನ ಮಿತಿ; ಹಿರಿಯ ಸಂಸದರ ಸಂಖ್ಯೆಯಲ್ಲಿ ಇಳಿಕೆ