ಖಾಜೀರ್, ಇರಾಕ್: ಐ.ಎಸ್.ಐ. ಉಗ್ರರ ವಶದಲ್ಲಿರುವ ಮೋಸಲ್ ನಗರವನ್ನು ಮರು ವಶಪಡಿಸಿಕೊಳ್ಳಲು ಅಮೆರಿಕ ನೇತೃತ್ವದ ಮಿತ್ರ ಪಡೆಯು ಮಂಗಳವಾರದಿಂದ ಭೀಕರ ದಾಳಿ ನಡೆಸುತ್ತಿವೆ.
ಮಿತ್ರಪಡೆ ಸೈನಿಕರು ತಂತ್ರಕಾರಿಕೆಯಿಂದ ಇರಾಕ್ ನ ನಿನೆವ್ಹ್ ಬಯಲು ಪ್ರದೇಶದ ಪೂರ್ವ ದಿಕ್ಕಿನಿಂದ ದಾಳಿ ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ಆರಂಭದಲ್ಲಿ ಇರಾಕ್ ನ ೨೫ ಸಾವಿರಕ್ಕೂ ಹೆಚ್ಚು ಕುರ್ದ್ ಹೋರಾಟಗಾರರು ನೇತೃತ್ವವಹಿಸಿದ್ದರು. ಒಂದು ವಾರದಿಂದ ತಿಂಗಳ ಪರ್ಯಂತ ಈ ಹೋರಾಟ ನಡೆಯಲಿದೆ ಎನ್ನಲಾಗಿದೆ.
ನಿನ್ನೆ ದಿನದ ಹೋರಾಟದಲ್ಲಿ ಕುರ್ದ್ ಹೋರಾಟಗಾರರು ೨೦ ಚ. ಕಿ.ಮೀ. ಪ್ರದೇಶ ಮರುವಶ ಮಾಡಿಕೊಂಡಿದ್ದಾರೆ ಎಂದು ಇರಾಕ್ ಕುರ್ದಿಸ್ತಾನ್ ವಲಯದ ಅಧ್ಯಕ್ಷ ಹೇಳಿದ್ದಾರೆ. ಮಿತ್ರ ಪಡೆಗಳು ಜನವಸತಿಯಿಲ್ಲದ ಊರುಗಳನ್ನು ಮಾತ್ರ ವಶಪಡಿಸಿಕೊಂಡಿವೆ. ಐ.ಎಸ್.ಐ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇರಾಕ್ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.