ಬೆಂಗಳೂರು: ವಿದೇಶದಲ್ಲಿ ಭಾರತೀಯರಿಗೆ ಅವಮಾನವಾಗುವಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಬೆಂಗಳೂರು ಮೂಲದ ಯುವತಿಯೊಬ್ಬರು ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಅಂತಹದ್ದೇ ಘಟನೆ ನಡೆದಿದೆ.
ಫ್ರಾಂಕ್ ಫರ್ಟ್ ನಿಂದ ಐಸ್ ಲ್ಯಾಂಡ್ ಗೆ ತೆರಳುತ್ತಿದ್ದ ಶ್ರುತಿ ಬಸಪ್ಪ ಬಟ್ಟೆ ಬಿಚ್ಚಿಸಿ ಅಧಿಕಾರಿಗಳು ತಪಾಸಣೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನು ಸ್ವತಃ ಶ್ರುತಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದರು. ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿವರಣೆ ಕೇಳಿದ್ದಾರೆ.
ತನ್ನ ನಾಲ್ಕು ವರ್ಷದ ಪುತ್ರಿಯ ಎದುರಲ್ಲೇ ಅಧಿಕಾರಿಗಳು ಬಟ್ಟೆ ಮೇಲೆತ್ತುವಂತೆ ಹೇಳಿದ್ದು, ಒಳಗೆ ಏನಾದರೂ ಶಂಕಾಸ್ಪದ ವಸ್ತು ಕೊಂಡೊಯ್ಯುತ್ತಿದ್ದಾರೆಯೇ ಎಂದು ಪರಿಶೀಲಿಸಿದರು ಎಂದು ಆಕೆ ವಿವರಿಸಿದ್ದಾರೆ. ಶ್ರುತಿ ಬಿಇಎಂಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ