Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಲೂಚಿಸ್ತಾನ್ ಜನತೆ ಯಾವತ್ತೂ ಭಾರತದ ಗುಲಾಮರಾಗುವುದಿಲ್ಲ: ಬಲೂಚಿಸ್ತಾನ್ ಸಿಎಂ

ಬಲೂಚಿಸ್ತಾನ್ ಜನತೆ ಯಾವತ್ತೂ ಭಾರತದ ಗುಲಾಮರಾಗುವುದಿಲ್ಲ: ಬಲೂಚಿಸ್ತಾನ್ ಸಿಎಂ
ಇಸ್ಲಾಮಾಬಾದ್ , ಸೋಮವಾರ, 17 ಏಪ್ರಿಲ್ 2017 (20:40 IST)
ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ಥಾನ ಪ್ರಾಂತ್ಯದ ಜನತೆ ಭಾರತದ "ಗುಲಾಮರಾಗಲು ಎಂದಿಗೂ ಒಪ್ಪುವುದಿಲ್ಲ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ಹೇಳಿದ್ದಾರೆ.  
ಬಲೂಚಿಸ್ತಾನದ ಅಂಜೇರಾ ಕಾಲತ್ ಪ್ರದೇಶದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ, ಬಲೂಚಿಸ್ತಾನ ಜನತೆ ಸಹೋದರರಂತೆ ಪಾಕಿಸ್ತಾನದಲ್ಲಿಯೇ ಜೀವನ ಸಾಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.
 
ಶತ್ರುಗಳ ಅಜೆಂಡಾವನ್ನು ಪ್ರಚಾರ ಮಾಡುತ್ತಿರುವ ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ತಾನ್ ಜನತೆ "ಭಾರತದ ಗುಲಾಮರಾಗುವುದಿಲ್ಲ. ವಿದೇಶದಲ್ಲಿ ಕುಳಿತಿರುವ ಕೆಲ ವಿಚ್ಚಿದ್ರಕಾರಿ ಶಕ್ತಿಗಳು, ತಮ್ಮ ಮಹಾಪಾತಕದ ಕೃತ್ಯಗಳಿಗಾಗಿ ನಮ್ಮ ಯುವಕರನ್ನು ಬಳಸಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.
 
ಸಾಮಾಜಿಕ ಮಾಧ್ಯಮ ವಿಮೋಚನೆಗೆ ಮಾನದಂಡವಲ್ಲ. ವಾಸ್ತವವಾಗಿ, ಬಲೊಚ್ ಜನರು ಶ್ರೀಮಂತ ಮತ್ತು ಶಾಂತಿಯುತ ಪಾಕಿಸ್ತಾನ ಬಯಸುತ್ತಾರೆ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಕ್‌ವಾಡ್ ಎಫೆಕ್ಟ್: ಅಶಿಸ್ತಿನ ಪ್ರಯಾಣಿಕರಿಗೆ 15 ಲಕ್ಷ ದಂಡ ವಿಧಿಸಲಿರುವ ಏರ್ ಇಂಡಿಯಾ