ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಕಾಡುಬೆಕ್ಕಗಳನ್ನ ಸಾಮೂಹಿಕವಾಗಿ ಕೊಲ್ಲುವ ನಿರ್ಧಾರವನ್ನು ಅಲ್ಲಿನ ಸರ್ಕಾರ ಮಾಡಿವೆ ಎಂಬುದಾಗಿ ತಿಳಿದುಬಂದಿದೆ.
ಹೌದು. ಈ ಕಾಡುಬೆಕ್ಕುಗಳು ಪ್ರತಿದಿನ 1 ಮಿಲಿಯನ್ ಸ್ಥಳೀಯ ಪಕ್ಷಿಗಳನ್ನ ಹಾಗೂ 1.7 ಮಿಲಿಯನ್ ಸರೀಸೃಪಗಳಾದ ಹಾವು, ಆಮೆ, ಓತಿಕೇತಾ ಮೊದಲಾದ ಪ್ರಾಣಿಯನ್ನ ತಿಂದು ಮುಗಿಸುವುದರ ಮೂಲಕ ಇತರೆ ಸಸ್ತನಿಗಳ ಅಳಿವಿಗೆ ಕಾರಣವಾಗುತ್ತಿವೆ. ಇದರಿಂದಾಗಿ ಇತರೆ ಪ್ರಾಣಿ ಪಕ್ಷಿಗಳ ಉಳಿವಿಗೆ ಈ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಅದಕ್ಕಾಗಿ ವಿಷ ಬೆರೆಸಿದ ಆಹಾರವನ್ನ ನೀಡಿ ಬೆಕ್ಕುಗಳನ್ನು 15 ನಿಮಿಷಗಳಲ್ಲಿ ಸಾವನ್ನಪ್ಪುವಂತೆ ಮಾಡಲು ಸರ್ಕಾರದ ಪ್ಲ್ಯಾನ್ ಮಾಡಿದೆ.
ಆದರೆ ಸರ್ಕಾರದ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದ್ದು, ಕಾಡುಬೆಕ್ಕುಗಳನ್ನ ಕೊಲ್ಲುವ ಯೋಜನೆಯನ್ನ ಕೈಬಿಟ್ಟು ಇನ್ನೂ ಉತ್ತಮವಾದ ಬೇರೆ ಯೋಜನೆಯನ್ನ ರೂಪಿಸುವಂತೆ ನೆಟ್ಟಿಗರು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.