ನವದೆಹಲಿ: ಢೋಕ್ಲಾಂ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಯುದ್ಧೋನ್ಮಾದದಲ್ಲಿರುವ ಚೀನಾಕ್ಕೆ ವಿದೇಶಾಂಗ ಸಚಿವ ಅರುಣ್ ಜೇಟ್ಲಿ ತಕ್ಕ ಎದಿರೇಟು ನೀಡಿದ್ದಾರೆ.
ನಾವು 1962 ರಲ್ಲಿ ಸೋತಿದ್ದೇವೆ. ಆ ಸೋಲೇ ನಮಗೆ ಪಾಠ ಕಲಿಸಿದೆ. ಹಾಗಾಗಿ 1965 ಮತ್ತು 1971 ರಲ್ಲಿ ಗೆದ್ದು ತೋರಿಸಿದ್ದೇವೆ. ನಮ್ಮ ಸೇನೆ ಈಗ ಸಂಪೂರ್ಣ ಸಾಮರ್ಥ್ಯ ಹೊಂದಿದೆ’ ಎಂದು ಜೇಟ್ಲಿ ಖಡಕ್ ಆಗಿ ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ಸೇನೆ ಹಿಂತೆಗೆದುಕೊಳ್ಳದಿದ್ದರೆ ಯುದ್ಧಕ್ಕೆ ಸಿದ್ಧರಾಗಿ. ಚೀನಾದ ಸೇನೆಯನ್ನು ಎದುರಿಸುವ ತಾಕತ್ತು ಭಾರತಕ್ಕಿಲ್ಲ. ಹಿಂದೆ ಅನುಭವಿಸಿರುವ ಸೋಲು ಮರೆಯಬೇಡಿ ಎಂದು ಸರ್ಕಾರಿ ಮಾಧ್ಯಮಗಳ ಮೂಲಕ ರಣಕಹಳೆ ಮೊಳಗಿಸುತ್ತಿರುವ ಚೀನಾಗೆ ಜೇಟ್ಲಿ ಈ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ