ಬರ್ಲಿನ್ : ವೃದ್ಧೆಯೊಬ್ಬಳು ಆಸ್ಪತ್ರೆಯಲ್ಲಿದ್ದ ವೆಂಟಿಲೇಟರ್ ಶಬ್ದವು ಕಿರಿಕಿರಿಯಾಗುತ್ತಿದೆ ಎಂದು ಪಕ್ಕದಲ್ಲಿದ್ದ ರೋಗಿಯ ವೆಂಟಿಲೇಟರ್ನ್ನು ಆಫ್ ಮಾಡಿದ ಘಟನೆ ಜರ್ಮನಿಯಲ್ಲಿ ನಡೆದಿದೆ.
ಜರ್ಮನ್ನ ನೈರುತ್ಯ ನಗರವಾದ ಮ್ಯಾನ್ಹೈಮ್ನಲ್ಲಿ ಈ ಘಟನೆ ನಡೆದಿದೆ. 72 ವರ್ಷದ ಜರ್ಮನ್ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು.
ಈ ಸಂದರ್ಭದಲ್ಲಿ ಆಕೆಯ ಪಕ್ಕದಲ್ಲಿದ್ದ ರೋಗಿಯನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಆದರೆ ಆ ವೆಂಟಿಲೇಟರ್ನಿಂದ ತೀವ್ರ ಶಬ್ದ ಬರುತ್ತಿದೆ ಎಂದು 2 ಬಾರಿ ಆಫ್ ಮಾಡಿದ್ದಾಳೆ.
ಆದರೆ ಅಷ್ಟರಲ್ಲಿ ವೈದ್ಯರು ಗಮನಿಸಿದ್ದು, ವೆಂಟಿಲೇಟರ್ನಲ್ಲಿದ್ದ ರೋಗಿಯು ಸಾವಿನ ದವಡೆಯಿಂದ ಪಾರಾಗಿದ್ದಾನೆ. ಆದರೂ ಆತನಿಗೆ ತೀವ್ರ ನಿಗಾ ಘಟಕದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.