ಆಧಾರ್ ಮಾಹಿತಿ ಸೋರಿಕೆ ಕುರಿತಂತೆ ದೇಶಾದ್ಯಂತ ವಾದ ವಿವಾದಗಳು ನಡೆಯುತ್ತಿರುವ ಬೆನ್ನನ್ನೇ ವಿಶ್ವಾದ್ಯಂತ ತನ್ನ ತನಿಖಾ ವರದಿಗಳ ಮೂಲಕ ದೊಡ್ಡ ದೊಡ್ಡ ತಲೆಗಳಿಗೆ ಬಿಸಿ ಮುಟ್ಟಿಸಿರುವ ವಿಕಿ ಲೀಕ್ಸ್ ಶಾಕಿಂಗ್ ನ್ಯೂಸ್ ಕೊಟ್ಟಿದೆ.
ಅಮೆರಿಕದ ಉನ್ನತ ಗುಪ್ತಚರ ಸಂಸ್ಥೆ ಸಿಐಎ ಭಾರತದ ಆಧಾರ್ ಕಾರ್ಡ್`ಗಳ ಬಯೋಮೆಟ್ರಿಕ್ ದತ್ತಾಂಶವನ್ನ ಪಡೆಯಬಲ್ಲ ತಂತ್ರಜ್ಞಾನ ಹೊಂದಿದೆ ಎಂದು ವಿಶ್ವಾದ್ಯಂತ ನಡೆಸಿದ ಗುಪ್ತ ಕಾರ್ಯಾಚರಣೆಗಳ ರಹಸ್ಯ ವರದಿಯಲ್ಲಿ ವಿಕಿ ಲೀಕ್ಸ್ ಉಲ್ಲೇಖಿಸಿದೆ.
ಸಿಐಎ ಒಳಗೊಂಡಿರುವ ಟೆಕ್ನಿಕಲ್ ಸರ್ವೀಸಸ್ ಶಾಖಾ ಕಚೇರಿಯು ವಿಶ್ವಾದ್ಯಂತ ಸಂಪರ್ಕ ಸೇವೆಗಳಿಗೆ ಒದಗಿಸುವ ಒಂದು ಬಯೋಮೆಟ್ರಿಕ್ ಸಂಗ್ರಹಣಾ ವ್ಯವಸ್ಥೆಯನ್ನು ಹೊಂದಿದೆ ಎಂದು ವಿಕಿ ಲೀಕ್ಸ್ ಪತ್ರಿಕಾ ಹೇಳಿಕೆ ರಿಲೀಸ್ ಮಾಡಿದ್ದು, ಈ ಕಾರ್ಯಾಚರಣೆಯನ್ನ ಎಕ್ಸ್`ಪ್ರೆಸ್ ಲೇನ್ ಪ್ರಾಜೆಕ್ಟ್ ಆಫ್ ಸಿಐಎ ಎಂದು ವಿಕಿ ಲೀಕ್ಸ್ ಕರೆದಿದೆ.
ವಿಕಿ ಲೀಕ್ಸ್ ವರದಿಗಳ ಪ್ರಕಾರ, ಸಂಪರ್ಕ ಸೇವೆಯ ರಹಸ್ಯ ಮಾಹಿತಿಗಳನ್ನ ಪಡೆಯಲು ಸಿಐಎ ಬಳಸುತ್ತಿರುವ ಸಾಧನ ಎಕ್ಸ್`ಪ್ರೆಸ್ ಲೇನ್ ಆಗಿದೆ. ಈ ಮೂಲಕ ವಿಶ್ವದ ಯಾವುದೇ ಬಯೋಮೆಟ್ರಿಕ್ ದತ್ತಾಂಶವನ್ನ ಸಿಐಎ ಪಡೆಯಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ