ಅರಿಜೋನಾ : ಹದಿನಾಲ್ಕು ವರ್ಷ ಕೋಮಾ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ.
ಹದಿನಾಲ್ಕು ವರ್ಷ ದಿಂದ ಮಹಿಳೆಯ ಎಡಗಡೆಯ ಮೆದುಳು ಹಾನಿಗೊಂಡು ನಿಷ್ಕ್ರಿಯಗೊಂಡ ಸ್ಥಿತಿಯಲ್ಲಿದ್ದ ಕಾರಣ ಆಕೆಗೆ ಅರಿಜೋನಾದಲ್ಲಿರುವ ಚಿಕಿತ್ಸಾ ಕೇಂದ್ರವೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಹೀಗೆ ಕೋಮಾದಲ್ಲಿದ್ದ ಮಹಿಳೆ ಡಿಸೆಂಬರ್ 29ರಂದು ಮಗುವಿಗೆ ಜನ್ಮ ನೀಡಿದ್ದಾರೆ.
ಮಹಿಳೆ ಮಗುವಿಗೆ ಜನ್ಮ ನೀಡುವವೆರೆಗೂ ಆಕೆ ಗರ್ಭಿಣಿಯಾಗಿದ್ದಳು ಎಂಬ ವಿಷಯ ಚಿಕಿತ್ಸಾ ಕೇಂದ್ರದವರಿಗೆ ತಿಳಿದಿರಲಿಲ್ಲ. ಆದರೆ ಕೋಮಾದಲ್ಲಿರುವ ಮಹಿಳೆಯ ಮೇಲೆ ಚಿಕಿತ್ಸಾ ಕೇಂದ್ರದಲ್ಲಿನ ನೌಕರರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಶಂಕೆ ಪೊಲೀಸರು ವ್ಯಕ್ತ ಪಡಿಸಿದ್ದಾರೆ. ಆದ್ದರಿಂದ ಅಲ್ಲಿನ ಪುರುಷ ನೌಕರರ ಡಿಎನ್‍ಎ ಪತ್ತೆ ಮಾಡಿ ಮಗುವಿನ ಅಪ್ಪ ಯಾರು ಎಂದು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.