Webdunia - Bharat's app for daily news and videos

Install App

ಅಂತರಿಕ್ಷ ತಲುಪಿದ ಮಕ್ಕಳು ಬಿಟ್ಟ ಟೆಡ್ಡಿಬೇರ್

Webdunia
ಮಂಗಳವಾರ, 13 ಜೂನ್ 2017 (15:19 IST)
ಲಂಡನ್: ಶಾಲಾಮಕ್ಕಳು ಬಿಟ್ಟ ಈ ಟೆಡ್ದಿಬೇರ್ ಅಂತರಿಕ್ಷಕ್ಕೆ ಹೋಗಿ ತಲುಪಿದೆ ಗೊತ್ತಾ. ಅಚ್ಚರಿ ಅನಿಸಿದ್ರೂ ನಿಜಾ ಕಣ್ರಿ.. ಲಂಡನ್ ನ ಕೆಮ್ಟ್ ಬೋಲೆ ಹಿಲ್ಸ್ ಪ್ರದೇಶದ ಕಿಂಗ್ಸ್ ರೋಚೆಸ್ಟರ್ ಪ್ರಿಪೆರೆಟರಿ ಶಾಲೆ ವಿದ್ಯಾರ್ಥಿಗಳು ಇಂತದ್ದೊಂದು ವಿನೂತನ ಪ್ರಯೋಗ ಮಾಡಿದ್ದಾರೆ.
 
ಆಪರೇಷನ್ ಕಾಸ್ಮಿಕ್ ಡಸ್ಟ್ ಹೆಸರಿನ ಯೋಜನೆಗೆ ರೊಫ್ಪಾ ಎಂದು ಹೆಸರಿಟ್ಟು ಈ ಶಾಲಾ ವಿದ್ಯಾರ್ಥಿಗಳು ಹೀಲಿಯಂ ಬಲೂನ್ ಗೆ ಟೆಡ್ಡಿಬೇರ್ ಒಂದನ್ನು ಕಟ್ಟಿದ್ದರು. ಅದೀಗ 100,000 ಅಡಿ ಎತ್ತರಕ್ಕೆ ಹೋಗಿ ಅಂತರಿಕ್ಷ ಸೇರಿದೆ.
 
ಈ ವಿದ್ಯಾರ್ಥಿಗಳು ಹಾರಿಬಿಟ್ಟ ಬಲೂನ್ ಭೂ ಮೇಲ್ಮೈ ನ ಎರಡನೇ ಅತಿ ದೊಡ್ಡ ಪದರವಾದ ಸ್ಟ್ರಾಟೋಸ್ಪೇರ್ ಅಂದರೆ ಭೂಮಿಯಿಂದ 29 ಕಿ.ಮೀ ಎತ್ತರಕ್ಕೆ ತಲುಪಿ ಅಲ್ಲಿನ ಒತ್ತಡಕ್ಕೆ ಸ್ಫೋಟಗೊಂಡಿದೆ. ಇದಕ್ಕೆ ಕಟ್ಟಿಬಿಟ್ಟಿದ್ದ ಕ್ಯಾಮರಾ ಇದರ ವಿಡಿಯೋವನ್ನು ರೆಕಾರ್‍ಡ್ ಸಹ ಮಾಡಿದೆ.
 
ಈ ರೊಫ್ಪಾ ಬಲೂನ್ ನಾಲ್ಕು ಗಂಟೆಗಳ ಕಾಲ ಗಾಳಿಯಲ್ಲೇ ತೇಲಾಡುತ್ತಿತ್ತು. ಅದಕ್ಕೆ ಕಟ್ಟಿದ್ದ GoPro ಕ್ಯಾಮರಾ ಒಂದು ಗಂಟೆಗೂ ಮುಂಚೆ ರೆಕಾರ್ಡ್ ಮಾಡುವುದನ್ನು ನಿಲ್ಲಿಸಿತ್ತು ಎಂದು ಶಾಲೆ ತಿಳಿಸಿದೆ.8ರಿಂದ 13 ವರ್ಷದ ವಿದ್ಯಾರ್ಥಿಗಳಿಗೆ ಅಂತರಿಕ್ಷದ ಬಗ್ಗೆ ತಿಳಿಸುವುದು ಈ ಯೋಜನೆ ಉದ್ದೇಶವಾಗಿತ್ತು.
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments