ಜಪಾನ್ : ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಹೆಚ್ಚಾಗಿ ನಡೆಯುತ್ತಿರುತ್ತದೆ. ಆದಕಾರಣ ಜಪಾನ್ ನ 29 ವರ್ಷದ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನಗಳ ಕಳ್ಳತನವನ್ನು ತಡೆಯಲು ಒಂದು ವಿಭಿನ್ನವಾದ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.
ಈತನ ಪ್ರಕಾರ ದ್ವಿಚಕ್ರ ವಾಹನಗಳ ಮೇಲೆ ಪಕ್ಷಿಯ ಹಿಕ್ಕೆಯಂತಹ ಸ್ಟಿಕರ್ ಅಂಟಿಸುವುದು. ಇದರಿಂದ ಕಳ್ಳನಿಗೆ ವಾಹನ ಕದಿಯಲು ಮನಸ್ಸಾಗುವುದಿಲ್ಲ ಎನ್ನಲಾಗಿದೆ. ಈ ಐಡಿಯಾ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಯಲು ಈತ ಲಾಕ್ ಮಾಡದಿರುವ 1000 ಬೈಕ್ ಗಳ ಮೇಲೆ ಪಕ್ಷಿಯ ಹಿಕ್ಕೆಯಂತಹ ಸ್ಟಿಕರ್ ಅಂಟಿಸಲಾಗಿತ್ತು.
ಆಶ್ಚರ್ಯವೇನೆಂದರೆ ಪಕ್ಷಿಯ ಹಿಕ್ಕೆಯಂತಹ ಸ್ಟಿಕರ್ ಅಂಟಿಸಿದ ಒಂದು ಬೈಕ್ ಕೂಡ ಕಳ್ಳತನವಾಗಲಿಲ್ಲ ಎನ್ನಲಾಗಿದೆ. ಆತನ ಈ ಐಡಿಯಾಗೆ ಮನಸೋತ ಸಾರ್ವಜನಿಕರು ದೇಣಿಗೆ ರೂಪದಲ್ಲಿ 4,50,000ಯೆನ್ ಗಳನ್ನ ನೀಡಿದ್ದಾರೆ ಎನ್ನಲಾಗಿದೆ.