ಢಾಕಾ : ಬಾಂಗ್ಲಾ ದೇಶದ ಕ್ರಿಕೆಟ್ ಆಟಗಾರ ಮೊಸದ್ದೀಕ್ ಹುಸೇನ್ ತಮ್ಮ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಅವರ ವಿರುದ್ಧ ದೂರು ದಾಖಲಾಗಿದೆ.
ಬಾಂಗ್ಲಾ ದೇಶದ ಕ್ರಿಕೆಟ್ ತಂಡದ ಆಟಗಾರ ಮೊಸದ್ದೀಕ್ ಹುಸೇನ್, ಶರ್ಮಿನ್ ಸಮಿರಾ ಉಷಾ ಅವರನ್ನ ಕಳೆದ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆವಾಗಿನಿಂದಲೂ ವರದಕ್ಷಿಣೆ ವಿಚಾರವಾಗಿ ತಮ್ಮ ಪತ್ನಿಗೆ ತೊಂದರೆ ನೀಡುತ್ತಿದ್ದು, ಪತ್ನಿ ಬಳಿ 8 ಲಕ್ಷ ರೂಪಾಯಿಗಳಿಗಾಗಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.
ಈ ಕುರಿತಾಗಿ ಮೊಸದ್ದೀಕ್ ಹುಸೇನ್ ವಿರುದ್ಧ ಗಂಭೀರ ಆರೋಪ ಮಾಡಿದ ಅವರ ಪತ್ನಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ರೋಸಿನಾ ಖಾನ್, ಈ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಬ್ಯಾಟ್ಸಮನ್ ಮೊಸದ್ದೀಕ್ ಹುಸೇನ್ ಈಗಾಗಲೇ ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.