ಅಮೆರಿಕದ ಮಿಚಿಗನ್ನಲ್ಲಿರುವ ಆಕ್ಸ್ಫರ್ಡ್ ಹೈಸ್ಕೂಲ್ನಲ್ಲಿ 15ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು,
ಶಿಕ್ಷಕರೂ ಸೇರಿ 8 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಕ್ಲ್ಯಾಂಡ್ ಕೌಂಟಿ ಉಪ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿ ಮೈಕೆಲ್ ಜಿ ಮೆಕ್ಕೇಬ್, ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ 16 ವರ್ಷದ ಬಾಲಕ, ಇನ್ನೊಬ್ಬಾತ 14 ವರ್ಷದವನು ಮತ್ತು ಇನ್ನೊಬ್ಬಳು 17 ವರ್ಷದ ಹುಡುಗಿ ಎಂದು ಮಾಹಿತಿ ನೀಡಿದ್ದಾರೆ.