Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುಂಡಿನ ದಾಳಿ ನಡೆಸಿದ ಬಾಲಕ!

ಗುಂಡಿನ ದಾಳಿ ನಡೆಸಿದ ಬಾಲಕ!
ಅಮೆರಿಕ , ಬುಧವಾರ, 1 ಡಿಸೆಂಬರ್ 2021 (08:57 IST)
ಅಮೆರಿಕದ ಮಿಚಿಗನ್ನಲ್ಲಿರುವ ಆಕ್ಸ್​​ಫರ್ಡ್ ಹೈಸ್ಕೂಲ್ನಲ್ಲಿ 15ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು,
ಶಿಕ್ಷಕರೂ ಸೇರಿ 8 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಕ್ಲ್ಯಾಂಡ್ ಕೌಂಟಿ ಉಪ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿ ಮೈಕೆಲ್ ಜಿ ಮೆಕ್‌ಕೇಬ್, ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ 16 ವರ್ಷದ ಬಾಲಕ, ಇನ್ನೊಬ್ಬಾತ 14 ವರ್ಷದವನು ಮತ್ತು ಇನ್ನೊಬ್ಬಳು 17 ವರ್ಷದ ಹುಡುಗಿ ಎಂದು ಮಾಹಿತಿ ನೀಡಿದ್ದಾರೆ. 
ಇನ್ನು ಗಾಯಗೊಂಡ 8 ಮಂದಿಯಲ್ಲಿ ಒಬ್ಬರು ಶಿಕ್ಷಕರು. ಅವರಲ್ಲಿ ಆರು ಮಂದಿಯ ಸ್ಥಿತಿ ಸ್ಥಿರವಾಗಿದ್ದು, ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ ಅವರಿಗೆ ಸರ್ಜರಿ ಮಾಡಲಾಗಿದೆ.  ಆಕ್ಸ್ಫರ್ಡ್ ಹೈಸ್ಕೂಲ್ನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್  ಸಿಬ್ಬಂದಿ ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈತನಿಂದ ಒಂದು ಹ್ಯಾಂಡ್ಗನ್ ಕೂಡ ವಶಪಡಿಸಿಕೊಳ್ಳಲಾಗಿದೆ. ಇನ್ನು ಶಾಲೆಯಲ್ಲಿ 15-20 ಬಾರಿ ಗುಂಡು ಹಾರಿಸಲಾಗಿದೆ ಎಂದು ಮೆಕ್ಕೇಬ್ ತಿಳಿಸಿದ್ದಾರೆ. ಅಂದಹಾಗೆ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದವನು ಒಬ್ಬನೇ. ಅವನ ಜತೆ ಇನ್ಯಾರೂ ಇರಲಿಲ್ಲ ಎಂಬುದಕ್ಕೆ ಕೆಲವು ಪುರಾವೆಗಳು ಸಿಕ್ಕಿವೆ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದೂ ಮೆಕ್ಕೇಬ್ ಹೇಳಿದ್ದಾರೆ.
ಗುಂಡಿನ ದಾಳಿ ನಡೆಯುತ್ತಿದ್ದಂತೆ ಶೀಘ್ರವೇ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ನಡೆಯಿತು. ಕೂಡಲೇ ಅಲ್ಲಿಗೆ ಅವರ ಕುಟುಂಬದವರು, ಸಂಬಂಧಿಕರನ್ನು ಕರೆಸಲಾಯಿತು. 25 ರಕ್ಷಣಾ ಏಜೆನ್ಸಿನಗಳು, 60 ಆಂಬುಲೆನ್ಸ್ಗಳು ಸ್ಥಳಕ್ಕೆ ಬಂದವು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಜಾನ್ ಲೈಮನ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಗಳು ಇಬ್ಬರೂ ತಬ್ಬಿಕೊಂಡು ನದಿಗೆ ಹಾರಿದರು!