Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೆಟ್ರೋಲ್ ಟ್ಯಾಂಕರ್ ಸ್ಪೋಟ: 72 ಸಾವು, 100 ಜನರಿಗೆ ಗಾಯ

ಪೆಟ್ರೋಲ್ ಟ್ಯಾಂಕರ್ ಸ್ಪೋಟ: 72 ಸಾವು, 100 ಜನರಿಗೆ ಗಾಯ
ಜೋಹಾನ್ಸ್‌ಬರ್ಗ್ , ಶುಕ್ರವಾರ, 18 ನವೆಂಬರ್ 2016 (11:49 IST)
ಪೆಟ್ರೊಲ್ ಟ್ಯಾಂಕರ್‌ ಸ್ಟೋಟವಾಗಿ ಬರೊಬ್ಬರಿ 73 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡ ಕರಾಳ ಘಟನೆ ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ನಲ್ಲಿ ಶುಕ್ರವಾರ ನಡೆದಿದೆ. ರಾಜಧಾನಿ ಮಾಪುಟೋದಿಂದ 2000ಕೀಲೋಮೀಟರ್ ದೂರದಲ್ಲಿ ಈ ದುರ್ಘಟನೆ ನಡೆದಿದೆ. 
ಜನರಿಗೆ ಪೆಟ್ರೋಲ್ ನೀಡಲೆಂದು ಪೆಟ್ರೋಲ್ ತುಂಬಿದ್ದ ಟ್ಯಾಂಕರ್‌ನ್ನು ರಸ್ತೆಬದಿಯಲ್ಲಿ ನಿಲ್ಲಿಸಲಾಗಿತ್ತು. ಪೆಟ್ರೋಲ್‌ಗಾಗಿ ಸಾಕಷ್ಟು ಜನರು ಸಾಲುಗಟ್ಟಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲಿ ಬಹಳ ಸಂಖ್ಯೆಯಲ್ಲಿ ಜನರಿದ್ದುದರಿಂದ ಕನಿಷ್ಠ 73 ಜನ ಸ್ಥಳದಲ್ಲಿಯೇ ಜೀವಂತವಾಗಿ ದಹನವಾಗಿದ್ದಾರೆ. 
 
ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 
 
ಮೊಜಾಂಬಿಕ್‌ ಜಗತ್ತಿನ ಅತಿ ಬಡ ರಾಷ್ಟ್ರಗಳಲ್ಲಿ ಒಂದಾಗಿದ್ದು, ಬರಗಾಲದಿಂದಾಗಿ ನಿರಂತರವಾಗಿ ಆಹಾರಕ್ಕಾಗಿ ಪರದಾಡುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮೋದ್ ಮುತಾಲಿಕ್ ಕಾರು ಅಪಘಾತ