Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಗತ್ತನ್ನು ನಿಬ್ಬೆರಗಾಗಿಸಿದ ಆ ನಾಲ್ಕು ಭವಿಷ್ಯವಾಣಿಗಳು!

ಜಗತ್ತನ್ನು ನಿಬ್ಬೆರಗಾಗಿಸಿದ ಆ ನಾಲ್ಕು ಭವಿಷ್ಯವಾಣಿಗಳು!
ನವದೆಹಲಿ , ಬುಧವಾರ, 22 ಫೆಬ್ರವರಿ 2017 (10:36 IST)
ಭವಿಷ್ಯದಲ್ಲಿ ಏನಾಗಲಿದೆ ಎಂಬ ಅರಿವು ನಮಗಿರುವುದಿಲ್ಲ. ಆದರೆ ಕೆಲವರು ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸುತ್ತಾರೆ. ಅವರು ಹೇಳಿದ್ದು ಸತ್ಯವಾದಾಗ ಜನರು ದಿಗ್ಭಮೆಯಾದ ಉದಾಹರಣೆಗಳು ಸಾಕಷ್ಟಿವೆ. ಫ್ರಾನ್ಸ್ ಫಿಲಾಸಪರ್ ನಾಸ್ಟ್ರಡಾಮಸ್ ಮತ್ತು ಬಲ್ಗೇರಿಯಾದ ಬಾಬಾ ವಂಗಾನಂತಹ ಕೆಲವರು ಹೇಳಿರುವ ಅನೇಕ ಭವಿಷ್ಯವಾಣಿಗಳು ಸತ್ಯವಾಗಿವೆ. ನಾವೀಗ ಹೇಳುತ್ತಿರುವ ಕೆಲ ಘಟನೆಗಳು ಮತ್ತು ಅವುಗಳ ಕುರಿತು ಮೊದಲೇ ಹೇಳಿದ್ದ ಭವಿಷ್ಯವಾಣಿಗಳು ನಿಮ್ಮನ್ನು ಅಚ್ಚರಿಗೆ ದೂಡುವುದಂತೂ ಸತ್ಯ.

 
9/11- ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಉಗ್ರ ದಾಳಿ
 
ಅಮೇರಿಕಾದ ಸಹೋದರರ ( ಇಬ್ಬರು ಸಹೋದರರ ಅರ್ಥ ಅವಳಿ ಟವರ್ ಎನ್ನಲಾಗುತ್ತಿದೆ) ಮೇಲೆ ಸ್ಟೀಲ್ ಬರ್ಡ್ಸ್ ( 2 ಹೈಜಾಕ್ ವಿಮಾನ)ಗಳಿಂದ ದಾಳಿ ಮಾಡುತ್ತವೆ ಮತ್ತು ಅವರು ನಾಶವಾಗುತ್ತಾರೆ. ಈ ಘಟನೆಯಲ್ಲಿ ಅಮಾಯಕರ ರಕ್ತದೋಕುಳಿ ಹರಿಯುತ್ತದೆ, ಎಂದು ಬಾಬಾ ವಾಂಗಾ ಮತ್ತು ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದರು. ಇದು ಸತ್ಯವಾಗಿದೆ.
 
ಮೊದಲ ಮಹಾಯುದ್ಧ
 
1914ರಲ್ಲಿ ಸೈಕೋಎನಾಲಿಸ್ಟ್ ಕಾರ್ಲ್ ಜಂಗ್ ಮೊದಲ ಮಹಾಯುದ್ಧದ ಬಗ್ಗೆ ಸ್ಪಷ್ಟ ಭವಿಷ್ಯವಾಣಿ ಮಾಡಿದ್ದರು. ಸಮುದ್ರದ ನೀರು ರಕ್ತದಂತೆ ಕೆಂಪಾಗುವ ಕನಸನ್ನು ಅವರು ಕಂಡಿದ್ದರು.ಆಲ್ಪ್ಸ್ ಪರ್ವತಗಳಿಂದ ಉತ್ತರ ಸಾಗರದವರೆಗೆ ಈ ರಕ್ತದ ನೀರು ಹರಡಿತ್ತು ಎಂಬುದು ಅವರ ಕನಸಾಗಿತ್ತು. ಅವರು ಈ ಕನಸು ಕಂಡ ಒಂದು ತಿಂಗಳ ನಂತರ ಮೊದಲ ಮಹಾಯುದ್ಧ ನಡೆಯಿತು.
 
 
ಹಿರೋಶಿಮಾ ಮತ್ತು ನಾಗಾಸಾಕಿ ಪರಮಾಣು ದಾಳಿ
 
ಹಿಟ್ಲರ್ ಎಂಬ ನರಹಂತಕ ಮತ್ತು ಹಿರೋಶಿಮಾ ಮತ್ತು ನಾಗಾಸಾಕಿ ಪರಮಾಣು ದಾಳಿಗಳ ಬಗ್ಗೆ ನಾಸ್ಟ್ರಡಾಮಸ್ ಭವಿಷ್ಯವಾಣಿ ನುಡಿದಿದ್ದರು. ಅಮೇರಿಕಾದ ಈ ದಾಳಿಯ ಜತೆಗೆ ಎರಡನೇ ಮಹಾಯುದ್ಧ ಅಂತ್ಯ ಕಂಡಿತು. 
 
ಅಬ್ರಹಾಂ ಲಿಂಕನ್, ಅಮೇರಿಕಾದ ಮಾಜಿ ಅಧ್ಯಕ್ಷ
 
ಅಮೇರಿಕಾದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಬೇರೆಯವರ ಹತ್ಯೆ ಬಗ್ಗೆ ಅಷ್ಟೇ ಅಲ್ಲ ತಮ್ಮ ಹತ್ಯೆ ಬಗ್ಗೆಯೂ ಸಹ ಸ್ಪಷ್ಟ ಅಂದಾಜು ಮಾಡಿದ್ದರು. ಶ್ವೇತ ಭವನದಲ್ಲಿ ಅಂತ್ಯಸಂಸ್ಕಾರವೊಂದರಲ್ಲಿ ಪಾಲ್ಗೊಂಡಂತೆ ಅವರಿಗೆ ಕನಸು ಬಿದ್ದಿತ್ತು. ಆ ಕನಸಲ್ಲವರು ಯಾರು ಸತ್ತಿದ್ದಾರೆ ಎಂದು ಅಲ್ಲಿದ್ದವರನ್ನು ಕೇಳಿದ್ದರು. ಅದಕ್ಕುತ್ತರ ಅಧ್ಯಕ್ಷರದು ಎಂಬುದಾಗಿತ್ತು. ಈ ಕನಸು ಬಿದ್ದ ಕೆಲವೇ ದಿನಗಳಲ್ಲಿ ಅವರು ಹತ್ಯೆಯಾಗಿದ್ದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಪಡಿತರ ಮಾದರಿಯಲ್ಲಿ ಕುಡಿಯುವ ನೀರು!