Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದಿಂದಾಗದ್ದು ಅಮೇರಿಕಾ ಮಾಡಿತು

ಭಾರತದಿಂದಾಗದ್ದು ಅಮೇರಿಕಾ ಮಾಡಿತು
ಲಾಹೋರ್ , ಮಂಗಳವಾರ, 31 ಜನವರಿ 2017 (09:24 IST)
ಕರಾಳ ಭಯೋತ್ಪಾದನೆ ಮ‌ೂಲಕ ಮುಂಬೈಯನ್ನು ನಡುಗಿಸಿದ 26/11 ದಾಳಿಯ ರೂವಾರಿ, ನಿಷೇಧಿತ ಜಮಾತ್ ಉದ್ ದವಾ ಮುಖಂಡ ಹಫೀಜ್ ಸಯೀದ್‌ನನ್ನು ಪಾಕಿಸ್ತಾನ ಗೃಹಬಂಧನದಲ್ಲಿ ಇರಿಸಿದೆ. ಅಮೇರಿಕಾದ ಪ್ರಬಲ ಒತ್ತಡದಡಿಯಲ್ಲಿ ಪಾಕ್ ಈ ಕ್ರಮವನ್ನು ಕೈಗೊಂಡಿದೆ. 
ಈತನ ನಾಲ್ವರು ಸಹಚರರಾದ ಉಬೈದ್, ಇಕ್ಬಾಲ್, ಅಬಿದ್ ಮತ್ತು ನಿಯಾಜ್ ಎಂಬುವವರನ್ನು ಕೂಡ ಪಾಕ್ ಗೃಹಬಂಧನಕ್ಕೆ ದೂಡಿದ್ದು, 6 ತಿಂಗಳ ಕಾಲ ಲಾಹೋರ್ ನಿವಾಸವನ್ನು ಬಿಡದಂತೆ ಹಫೀಜ್‌ ಮತ್ತು ಇತರರಿಗೆ ಎಚ್ಚರಿಕೆ ನೀಡಲಾಗಿದೆ.  
 
ಭಾರತದ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್‌ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಪದೇಪದೇ ಆಗ್ರಹಿಸುತ್ತಿತ್ತು. ಆತನನ್ನು ಪಾಕಿಸ್ತಾನವು ಆರಾಮವಾಗಿ ಓಡಾಡಿಕೊಂಡಿರಲು ಬಿಟ್ಟಿದೆ. ಸಾರ್ವಜನಿಕವಾಗಿ ಸಭೆಗಳನ್ನು ನಡೆಸಿ, ಭಾರತದ ವಿರುದ್ಧ ದ್ವೇಷ ಬಿತ್ತುವ ಭಾಷಣಗಳನ್ನು ನಡೆಸುವುದಕ್ಕೆ ನಿರ್ಬಂಧ ಹೇರಬೇಕು ಎಂದು ಕೂಡ ಭಾರತ ಒತ್ತಾಯಿಸಿತ್ತು. ಆದರೆ ಆತ ಪಾಕ್ ಪ್ರಜೆ, ಆತನ ಮೇಲಿನ ಆರೋಪಕ್ಕೆ ಸಾಕ್ಷ್ಯಗಳಿಲ್ಲ ಎನ್ನುತ್ತಿದ್ದ ಪಾಕ್ ಆತ ಮುಕ್ತವಾಗಿ ಓಡಾಡಿಕೊಂಡಿರಲು ಬಿಟ್ಟಿತ್ತು. ಹೀಗಾಗಿ ಹಫೀಜ್ ಭಾರತದ ವಿರುದ್ಧ ದ್ವೇಷ ಕಾರುತ್ತ ಆರಾಮಾಗಿ ಓಡಾಡಿಕೊಂಡಿದ್ದ. ಮತ್ತೀಗ ಅಮೇರಿಕಾ ಹೇರಿರುವ ಒತ್ತಡಕ್ಕೆ ಮಣಿದಿರುವ ಪಾಕ್ ಅನಿವಾರ್ಯವಾಗಿ ಆತನನ್ನು ಗೃಹಬಂಧನದಲ್ಲಿರಿಸಿದೆ.
 
ನಿರ್ಬಂಧಗಳನ್ನು ತಪ್ಪಿಸಲು ಜೆಯುಡಿ ಮತ್ತು ಸಯೀದ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಟ್ರಂಪ್ ಸರ್ಕಾರ ಬಲವಾದ ಒತ್ತಡ ಹೇರಿದ್ದರಿಂದ ಪಾಕ್ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. 
 
2008 ನವೆಂಬರ್ 11 ರಂದು ಮುಂಬೈನಲ್ಲಿ ಈತ ನಡೆಸಿದ ದಾಳಿಯಲ್ಲಿ 166 ಜನರು ಮೃತಪಟ್ಟು, 308 ಜನರು ಗಾಯಗೊಂಡಿದ್ದರು. ಈ ದಾಳಿ ಮತ್ತು ಇತರ ಪ್ರಮುಖ ದಾಳಿಗಳನ್ನು ಮುಂಟ್ಟುಕೊಂಡು ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಅಮೇರಿಕಾ ಪಾಕಿಸ್ತಾನಕ್ಕೆ ಸೂಚಿಸಿತ್ತು. 
 
ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ ಸಂಘಟನೆಯನ್ನು 2014 ರಲ್ಲಿ ಅಮೆರಿಕಾ ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಿತ್ತು. 
 
'ವಿದೇಶಿ ಭಯೋತ್ಪಾದಕರ ಪ್ರವೇಶದಿಂದ ಅಮೆರಿಕ ರಕ್ಷಣೆ’ ಹೆಸರಿನಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ವಲಸೆ ನೀತಿ ಜಾರಿಗೆ ತಂದಿದ್ದು, ಮುಸ್ಲಿಂ ಬಾಹುಳ್ಯವಿರುವ 7 ರಾಷ್ಟ್ರಗಳ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ.
 
ಸಿರಿಯಾ ನಾಗರಿಕರಿಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಇರಾನ್, ಇರಾಕ್, ಸೂಡಾನ್, ಲಿಬಿಯಾ, ಯೆಮನ್, ಸೋಮಾಲಿಯಾ ನಾಗರಿಕರಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂ ವಿತ್‌ಡ್ರಾ ಮಿತಿ ಹಿಂಪಡೆದ ಆರ್‌ಬಿಐ