ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಮಾನವೀಯತೆಯೂ ಇಲ್ಲ ಎಂಬುದು ಈ ಪ್ರಕರಣವನ್ನ ನೋಡಿದರೆ ಗೊತ್ತಾಗುತ್ತೆ. ಮಿನಿಕುದುರೆಯೊಂದನ್ನ 22 ವರ್ಷದ ವ್ಯಕ್ತಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿರುವ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಬೆಳಕಿಗೆ ಬಂದಿದೆ.’
ಕುದುರೆ ಜೊತೆ ಸರಸವಾಡಿ ಸಿಕ್ಕಿಬಿದ್ದ ವ್ಯಕ್ತಿಯನ್ನ 22 ವರ್ಷದ ಟ್ರವಿಸ್ ವಾಗ್ನರ್ ಎಂದು ಗುರ್ತಿಸಲಾಗಿದೆ. ಶುಕ್ರವಾರದಂದು ವಾಗ್ನರ್ ವಿರುದ್ಧದ ಆರೋಪ ಸಾಬೀತಾಗಿದ್ದು, 2 ವರ್ಷ ಮನೋಪರಿವರ್ತನಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, 2,200 ಡಾಲರ್ ದಂಡ ವಿಧಿಸಲಾಗಿದೆ.
2016ರಲ್ಲಿ ಪೆನ್ಸಿಲ್ವೇನಿಯಾದ ಲ್ಯಾನ್ಸೆಸ್ಟರ್ ಕೌಂಟಿಯ ಎಫ್ರಟಾದಲ್ಲಿ ಕುದುರೆ ಫಾರ್ಮ್`ಗೆ ಅನಧಿಕೃತವಾಗಿ ಪ್ರವೇಶಿಸಿದ್ದ ವ್ಯಾಗ್ನರ್ ಕಂದು ಮತ್ತು ಬಿಳಿ ಮಿಶ್ರಿತ ಬಣ್ಣದ ಕುದುರೆಯನ್ನ ಬಳಸಿಕೊಂಡಿದ್ದ. ವ್ಯಾಗ್ನರ್ ಕೃತ್ಯ ಕಂಡು ಗಾಬರಿಗೊಂಡ ಫಾರ್ಮ್ ಮಾಲೀಕ ಪೊಲೀಸರಿಗೆ ದೂರು ನೀಡಿದಾಗ ವ್ಯಾಗ್ನರ್`ನನ್ನ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ ವ್ಯಾಗ್ನರ 3 ಬಾರಿ ಮೂಕ ಕುದುರೆ ಜೊತೆ ಸಂಭೋಗ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.