ಸಮಯ ತಕ್ಕಂತೆ ಊಟ ತಿಂಡಿ ಮಾಡದಿದ್ದರೆ ದೇಹದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದನ್ನ ಕೇಳಿರುತ್ತೀರಿ. ಚೀನಾದ ಮಹಿಳೆಯೊಬ್ಬಳು 10 ವರ್ಷದಿಂದ ಉಪಾಹಾರ ಸೇವಿಸದೇ ಕಡೆಗಣಿಸಿದ್ದ ಪರಿಣಾಮ ಹೊಟ್ಟೆಯಲ್ಲಿ 200 ಕಲ್ಲುಗಳು ಬೆಳವಣಿಗೆಯಾಗಿವೆ.
ಚೆನ್ ಎಂಬ ಮಹಿಳೆ ಹೆಷೂ ಪ್ರದೇಶದ ಗುವಾಂದ್ದಜಿ ಆಸ್ಪತ್ರೆಗೆ ದಾಖಲಾದಾಗ ಪರೀಕ್ಷೆ ನಡೆಸಿದ ವೈದ್ಯರಿಗೆ ಶಾಕ್ ಕಾದಿತ್ತು. 200 ಗ್ರಾಂನಷ್ಟು ದೊಡ್ಡ ದೊಡ್ಡ ಕಲ್ಲುಗಳು ಹೊಟ್ಟೆಯಲ್ಲಿ ಪತ್ತೆಯಾಗಿದ್ದವು. ಅದರಲ್ಲು ಒಂದೊಂದು ಕಲ್ಲು ಮೊಟ್ಟೆ ಗಾತ್ರದಲ್ಲಿದ್ದವು. ಕಲ್ಲುಗಳಿಂದ ಹೊಟ್ಟೆ ನೋವು ಬಂದರೂ 10 ವರ್ಷಗಳಿಂದ ಕಡೆಗಣಿಸಿದ್ದಳು ಎನ್ನಲಾಗಿದೆ.
ವೈದ್ಯ ಕ್ಯೂಯಾನ್ ವೆಯ್ ಹೇಳುವ ಪ್ರಕಾರ, 10 ವರ್ಷಗಳಿಂದ ಬ್ರೇಕ್ ಫಾಸ್ಟ್ ಬಿಟ್ಟಿದ್ದರ ಪರಿಣಾಮವಿದು ಎಂದಿದ್ದಾರೆ. ಡಯಟ್ ಹೆಸರಲ್ಲಿ ಈ ಮಹಿಳೆ ಉಪಹಾರವನ್ನೇ ತೊರೆದಿದ್ದರಿಂದ ಬ್ಲಾಡರ್`ನಲ್ಲಿ ಕಲ್ಲು ಬೆಳೆದಿವೆ ಎನ್ನುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ