ರಿಯೋ ಡಿ ಜನೆರಿಯೋ 2016ರ ಒಲಿಂಪಿಕ್ಸ್ಗಾಗಿ ವಿಶ್ವದ ನೂರಾರು ಕ್ರೀಡಾಪಟುಗಳು ಲಕ್ಷಾಂತರ ಅಭಿಮಾನಿಗಳು ಆಗಮಿಸಲು ಕೇವಲ ಎರಡು ತಿಂಗಳುಗಳು ಬಾಕಿಯಿರುವಂತೆಯೇ 16 ವರ್ಷದ ಬಾಲಕಿಯ ಮೇಲೆ 33 ಮಂದಿ ಆರೋಪಿಗಳು ಗ್ಯಾಂಗ್ರೇಪ್ ಎಸೆದ ಹೇಯ ಘಟನೆ ವರದಿಯಾಗಿದೆ.
ಬಾಯ್ಫ್ರೆಂಡ್ ಮನೆಯಲು ಉಳಿದುಕೊಳ್ಳಲು ಬಾಲಕಿ ತೆರಳಿದ್ದಾಗ, ಆಕೆಯ ಬಾಯ್ಫ್ರೆಂಡ್ ಮತ್ತು ಆತನ 33 ಮಂದಿ ಗೆಳೆಯರು ಆಕೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ನೀಡಿ, ಪ್ರಜ್ಞೆ ತಪ್ಪಿದ ನಂತರ ಸುಮಾರು 36 ಗಂಟೆಗಳ ಕಾಲ 33 ಮಂದಿ ಆರೋಪಿಗಳು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
22 ಮಂದಿ ಆರೋಪಿಗಳ ಗ್ಯಾಂಗ್ರೇಪ್ನಿಂದ ಜರ್ಜರಿತವಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕಿ ಬಡ ಕುಟುಂಬಕ್ಕೆ ಸೇರಿದವಳಾಗಿದ್ದರಿಂದ ಪೋಷಕರು ಆಘಾತಗೊಂಡಿದ್ದಾರೆ. ನಮ್ಮ ಬಾಲಕಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆ ಮಾತನಾಡಿ, ಪುತ್ರಿಯ ಮೇಲೆ ಭೀಕರವಾಗಿ ಅತ್ಯಾಚಾರವೆಸಗಲಾಗಿದೆ.ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಾಲಕಿಯ ಮೇಲೆ ನಡೆದ ಗ್ಯಾಂಗ್ರೇಪ್ ವಿರುದ್ಧ ಸಾರ್ವಜನಿಕರು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು, 20 ವರ್ಷದ ಆಕೆಯ ಬಾಯ್ಫ್ರೆಂಡ್ ಸೇರಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ. ಇಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೆಬ್ದುನಿಯಾ ಮೊಬೈಲ್ ಆಪ್ (ಡೌನ್ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.