ಸ್ಕಾಟ್ ಲ್ಯಾಂಡ್: ಕೇವಲ ಮೂರು ತಿಂಗಳ ಅಂದರೆ 13 ವಾರಗಳ ಕಂದಮ್ಮ ಅಮ್ಮನಿಗೆ ಐ ಲವ್ ಯೂ ಎಂದು ಹೇಳಿದರೆ ಆ ಅಮ್ಮನಿಗಾಗುವ ಸಂತಸ-ಸಂಭ್ರಮ ಪದಗಳಲ್ಲಿ ಹೇಳಲಾಗದು. ಇಂತದ್ದೊಂದು ಅಪರೂಪದ ಘಟನೆ ಸ್ಕಾಟ್ ಲ್ಯಾಂಡ್ ನ ಗ್ಲಾಸ್ಗೋವ್ ನಗರದಲ್ಲಿ ನಡೆದಿದೆ.
ಕ್ಲೇರ್ ರೀಡ್ ಮತ್ತು ಗ್ರಾಂಟ್ ರೀಡ್ ದಂಪತಿಯ 3 ತಿಂಗಳ ಹೆಣ್ಣು ಮಗು ಎಲ್ಲಿ ರೀಡ್ ತನ್ನ ತಾಯಿ ಐ ಲವ್ ಯೂ ಹೇಳಿದಾಗ ತಾನು ಕೂಡ ಐ ಲವ್ ಯೂ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ 8 ತಿಂಗಳಾಗುವವರೆಗೆ ಯಾವುದೇ ಮಗು ಒಂದು ಪದವನ್ನೂ ಉಚ್ಛರಿಸುವುದಿಲ್ಲ. ಆದರೆ ಎಲ್ಲಿ ರೀಡ್ ಅಮ್ಮನ ಮಾತನ್ನೇ ಅನುಕರಿಸಿ ಐ ಲವ್ ಯೂ ಹೇಳಿರುವುದು ನಿಜಕ್ಕೂ ಅಚ್ಚರಿ. ಮುದ್ದಾದ ಮಗುವಿನ ಮುದ್ದು ಮಾತು ಕೇಳಿ ಸ್ವತ: ಅಮ್ಮನೇ ಬೆರಗಾಗಿ ಹೋಗಿದ್ದಾಳೆ. ಕ್ಲೇರ್ ರೀಡ್ ಪತಿ ಗ್ರಾಂಟ್ ರೀಡ್ ಗೆ ತಿಳಿಸಿದಾಗ ಈ ವಿಷಯವನ್ನು ಅವರು ನಂಬಿಯೇ ಇಲ್ಲವಂತೆ. ಬಳಿಕ ಕ್ಲೇರ್ ಅದನ್ನು ವಾಟ್ಸಪ್ ಮೂಲಕ ತನ್ನ ಪತಿಗೆ ಕಳುಹಿಸಿದ್ದಾಳೆ. ಈ ವಿಡಿಯೋ ನೋಡಿದ ಗ್ರಾಂಟ್ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ.