ಮಲೇಷ್ಯಾ: ಗಂಡ ಮಧುಮಂಚಕ್ಕೆ ಕರೆದರೆ ಮರು ಮಾತನಾಡದೇ ಪತ್ನಿ ಆತನ ಜತೆ ದೇಹ ಹಂಚಿಕೊಳ್ಳಬೇಕು. ಆಕೆ ಒಲ್ಲೆನೆನ್ನುವುದೂ ಒಂದು ರೀತಿಯ ಕೌಟುಂಬಿಕ ಕಿರುಕುಳ ಎಂಬ ವಿವಾದಿತ ಹೇಳಿಕೆಯೊಂದನ್ನು ಮಲೇಷ್ಯಾದ ಶಾಸಕರೊಬ್ಬರು ನೀಡಿದ್ದಾರೆ.
ಚೆ ಮೊಹಮ್ಮದ್ ಝುಲ್ಕಿಫಿ ಈ ರೀತಿಯ ಮಹಾನ್ ಷರಾ ಬರೆದ ಮಹಾನುಭಾವ. ಕೆಲವು ಕುಟುಂಬಗಳಲ್ಲಿ ಮಹಿಳೆಯರು ಗಂಡ ಸೆಕ್ಸ್ ಗೆ ಕರೆದರೆ, ಬಾರದೇ ಸತಾಯಿಸುತ್ತಾರೆ. ಇದೊಂದು ರೀತಿಯ ಮಾನಸಿಕ ಕಿರುಕುಳ ಎಂದು ಅವರು ಸಂಸತ್ತಿನಲ್ಲೇ ಹೇಳಿದ್ದಾರೆ.
ಕೌಟುಂಬಿಕ ಕಿರುಕುಳದ ಕಾನೂನಿಗೆ ತಿದ್ದುಪಡಿ ತರುವ ವಿದೇಯಕವೊಂದನ್ನು ಚರ್ಚಿಸುತ್ತಿದ್ದಾಗ ಅವರು ಆವೇಷದಿಂದ ಈ ರೀತಿ ಹೇಳಿದ್ದಾರೆ. ಶಾಸಕರ ಈ ಹೇಳಿಕೆಗೆ ಮಹಿಳಾವಾದಿಗಳಿಂದ ಸರಿಯಾಗಿಯೇ ತಿರುಗೇಟು ಸಿಕ್ಕಿದೆ. ಗಂಡ ಕರೆದ ತಕ್ಷಣ ಹೆಂಡತಿ ಸೆಕ್ಸ್ ಗೆ ಸಮ್ಮತಿಸಬೇಕೆಂದಿಲ್ಲ. ಅದು ಮಹಿಳೆಯರ ಹಕ್ಕು. ಇಂತಹವರೆಲ್ಲಾ ನಮ್ಮನ್ನು ಆಳುತ್ತಾರೆ ಎಂದು ಮಹಿಳಾ ಸಂಘಟನೆಗಳು ಚೆ ಮೊಹಮ್ಮದ್ ಗೆ ತಪರಾಕಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ