ಮುಂಬೈ: ಹಾಲಿವುಡ್ ನ ಆಪನ್ ಹೈಮರ್ ಎನ್ನುವ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ಜೊತೆಗೆ ಈ ಸಿನಿಮಾದ ದೃಶ್ಯವೊಂದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಿನಿಮಾದ ದೃಶ್ಯವೊಂದರಲ್ಲಿ ಲೈಂಗಿಕ ಕ್ರಿಯೆ ಮಾಡುವಾಗ ಕಥಾನಾಯಕ ಹಿಂದೂಗಳ ಪವಿತ್ರಗ್ರಂಥವಾದ ಭಗವದ್ಗೀತೆ ಓದುವ ದೃಶ್ಯವಿದೆ. ಇದನ್ನು ಭಾರತೀಯರು ಆಕ್ಷೇಪಿಸಿದ್ದಾರೆ.
ಸ್ವತಃ ಕೇಂದ್ರ ಸಚಿವ ಉದಯ್ ಮಹುರ್ಕರ್ ಈ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ವಿವಾದಗಳ ಹಿನ್ನಲೆಯಲ್ಲಿ ಈ ದೃಶ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ.