ಲಾಸ್ ಏಂಜಲೀಸ್: ಖ್ಯಾತ ಅಮೆರಿಕನ್ ನಟಿ ದಿವಂಗತ ಮರ್ಲಿನ್ ಮುನ್ರೋ ಧರಿಸಿದ್ದ ಉಡುಪೊಂದು 32 ಕೋಟಿ ರೂ. ಗೆ ಹರಾಜಾಗಿದೆ. ಜಗತ್ತಿನಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟವಾದ ಉಡುಗೆ ಎಂಬ ದಾಖಲೆಗೆ ಪಾತ್ರವಾಗಿದೆ.
1962 ರಲ್ಲಿ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ 45 ನೇ ಹುಟ್ಟುಹಬ್ಬ ಆಚರಿಸಿದ್ದಾಗ ಮುನ್ರೋ ಹ್ಯಾಪಿ ಬರ್ತ್ ಡೇ ಮಿ ಎಂದು ಹಾಡಿದ್ದರು. ಆಗ ಅವರು ಇದೇ ಉಡುಪು ಧರಿಸಿದ್ದರು.
ಲಾಸ್ ಏಂಜಲೀಸ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇದು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇದಕ್ಕಿಂತ ಮೊದಲು ದಾಖಲೆಯ ಮೊತ್ತಕ್ಕೆ ಹರಾಜಾದ ಉಡುಪೂ ಮುನ್ರೋ ಅವರದ್ದೇ ಆಗಿತ್ತು. ಅದು 30.6 ಕೋಟಿ ರೂ.ಗೆ ಮಾರಾಟವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ