Health Benefits Of Poporn: ಇದರಲ್ಲಿ ದೇಹಕ್ಕೆ ಅನುಕೂಲಕರವಾದ ಖನಿಜಾಂಶಗಳು, ಥಯಾಮಿನ್ ಮತ್ತು ನಯಾಸಿನ್ ಅಂಶಗಳು ನಮ್ಮ ಚರ್ಮದ ಅಂದವನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತವೆ ಎಂದು ಸಾಬೀತಾಗಿದೆ.
Photo Courtesy: Google
ಕೆಲವೊಂದು ವಸ್ತುಗಳನ್ನು ನಾವು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಆದರೆ ಅದರ ಪ್ರಯೋಜನಗಳು ಬಹಳಷ್ಟಿರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಮುಸುಕಿನ ಜೋಳ ಹಾಗೂ ಪಾಪ್ಕಾರ್ನ್. ಪಾಪ್ಕಾರ್ನ್ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಇದಕ್ಕೆ ವಯಸ್ಸಿನ ಹಂಗಿಲ್ಲ. ಸಿನಿಮಾ ಹೋದಾಗ ಅಥವಾ ಮನೆಯಲ್ಲಿ ಕ್ರಿಕೆಟ್ ಸಿನಿಮಾ ನೋಡುವಾಗ ಇದಿಲ್ಲದೆ ಸಾಧ್ಯವೇ ಇಲ್ಲ.ಮುಸುಕಿನ ಜೋಳವನ್ನು ಬೇಯಿಸಿ ಅಥವಾ ಹುರಿದು ಪಾಪ್ಕಾರ್ನ್ಸ್ ಮಾಡಿಕೊಂಡು ತಿನ್ನುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ.
ನೀವು ಗಮನಿಸಿ ನೋಡಿ, ಈ ಕಾರ್ನ್ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಸಣ್ಣ ಸಮಾರಂಭಗಳಲ್ಲಿ ಕೂಡ ಇದು ಇದ್ದೇ ಇರುತ್ತದೆ. ಜಾತ್ರೆಯಲ್ಲಿ ಕೂಡ ಸ್ವೀಟ್ ಕಾರ್ನ್ ಇರುತ್ತದೆ. ಇದೊಂದು ನೈಸರ್ಗಿಕ ಪದಾರ್ಥ ಎಂದರೆ ತಪ್ಪಾಗಲಾರದು.
ಆದರೆ ಮುಸುಕಿನ ಜೋಳ ನಮ್ಮ ಸೌಂದರ್ಯ ವೃದ್ಧಿಯಲ್ಲಿ ಹಾಗೂ ಆರೋಗ್ಯ ಅಭಿವೃದ್ದಿಯಲ್ಲಿ ಬಳಕೆಗೆ ಬರುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ? ಹೌದು, ಕೇಳಿದ್ರೆ ಆಶ್ಚರ್ಯವಾಗಬಹುದು ಆದರೂ ಕೂಡ ಇದು ನಿಜ. ಇದರಲ್ಲಿರುವ ಪೋಷಕಾಂಶಗಳು ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದೆ , ಅದು ಚರ್ಮದ ಆರೋಗ್ಯಕ್ಕೆ ಉತ್ತಮ.
ಇದರಲ್ಲಿ ದೇಹಕ್ಕೆ ಅನುಕೂಲಕರವಾದ ಖನಿಜಾಂಶಗಳು, ಥಯಾಮಿನ್ ಮತ್ತು ನಯಾಸಿನ್ ಅಂಶಗಳು ನಮ್ಮ ಚರ್ಮದ ಅಂದವನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತವೆ ಎಂದು ಸಾಬೀತಾಗಿದೆ.
ಮುಸುಕಿನ ಜೋಳದಲ್ಲಿ ಕಂಡುಬರುವ ಪ್ರಮುಖವಾದ ಮತ್ತು ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅಂಶ ಎಂದರೆ ಅದು ಲೈಕೋಪಿನ್. ವಿಟಮಿನ್ ಸಿ ಮತ್ತು ಲೈಕೋಪಿನ್ ಅಂಶಗಳು ತ್ವಚೆಯ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾಗಿದ್ದು. ಕಾರ್ನ್ ಸೇವನೆ ಮಾಡುವುದರ ಒಂದು ಪ್ರಮುಖ ಪ್ರಯೋಜನವೆಂದರೆ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು, ಇದು ಮಧ್ಯವಯಸ್ಕ ಪುರುಷರು ಮತ್ತು ಮಹಿಳೆಯರಿಗೆ ವಿಶೇಷವಾಗಿ ಸಾಬೀತಾಗಿದೆ.
ಇದರ ಜೊತೆಯಲ್ಲಿ, ಪಾಪ್ ಕಾರ್ನ್ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು (ಜಿಐ) ಹೊಂದಿದೆ, ಅಂದರೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿರ್ವಹಿಸಲು ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಇರುವ ಜನರು ತಮ್ಮ ಗ್ಲೂಕೋಸ್ ಮತ್ತು ಲಿಪಿಡ್ ಮಟ್ಟವನ್ನು ಸುಧಾರಿಸಲು ಇದು ಬಹಳ ಅಗತ್ಯವಿದೆ.
ಪಾಪ್ಕಾರ್ನ್ನಲ್ಲಿರುವ ಫೈಬರ್ನ ಅಧಿಕ ಸೇವನೆಯು ಹೃದಯರಕ್ತನಾಳದ ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ಕಡಿಮೆ ಮಾಡಿಕೊಳ್ಳುವುದು ಹಲವಾರು ಜನರಿಗೆ ಸವಾಲಿನ ಕೆಲಸ. ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಹಾಯ ಮಾಡುವ ಅಂಶಗಳು ಪಾಪ್ಕಾರ್ನ್ ನಲ್ಲಿದೆ. ಇದರ ಹೆಚ್ಚಿನ ಫೈಬರ್ ಅಂಶ, ಅದರ ಕಡಿಮೆ ಕ್ಯಾಲೋರಿ ನಿಮ್ಮ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.
ಪಾಪ್ಕಾರ್ನ್ನಲ್ಲಿ ಸಾಕಷ್ಟು ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಇರುತ್ತವೆ, ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಈ ಪ್ರಮುಖ ಪೋಷಕಾಂಶಗಳು ಪಾಪ್ಕಾರ್ನಲ್ಲಿದೆ.
ಫೋಲೇಟ್
ನಿಯಾಸಿನ್
ರಿಬೋಫ್ಲಾವಿನ್
ಥಯಾಮಿನ್
ಪ್ಯಾಂಟೊಥೆನಿಕ್ ಆಮ್ಲ
ವಿಟಮಿನ್ ಬಿ 6
ವಿಟಮಿನ್ ಎ
ವಿಟಮಿನ್ ಇ
ವಿಟಮಿನ್ ಕೆ
ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ, ಹೆಚ್ಚು ಉಪ್ಪು ಅಥವಾ ಬೆಣ್ಣೆ ಇಲ್ಲದೆ ಪಾಪ್ಕಾರ್ನ್ ತಿನ್ನುವುದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.