ಬೆಂಗಳೂರು: ಬೇಸಿಗೆಯಲ್ಲಿ ದೇಹಕ್ಕೆ ನೀರಿನಂಶ ಎಷ್ಟು ನೀಡಿದರೂ ಕಡಿಮೆಯೇ. ಸುಡುವ ಬಿಸಿಲಿಗೆ ದೇಹ ನಿರ್ಜಲೀಕರಣಕ್ಕೊಳಗಾಗುವುದು ಬೇಗ. ಹಾಗಾಗದಂತೆ ತಡೆಯಲು ಯಾವ ತರಕಾರಿ ತಿನ್ನಬೇಕು ನೋಡಿಕೊಳ್ಳಿ.
ಸೋರೆಕಾಯಿ
ಸೋರೆಕಾಯಿಯಲ್ಲಿ ಶೇಕಡಾ 90 ರಷ್ಟು ನೀರಿನಂಶವಿದೆ. ಆದಷ್ಟು ಇದರ ಜ್ಯೂಸ್ ಮಾಡಿ ಕುಡಿಯುವುದು ದೇಹಕ್ಕೆ ತಂಪು ನೀಡುವುದಲ್ಲದೆ, ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಜತೆಗೆ ಇದು ತೂಕ ಇಳಿಸಲೂ ಸಹಾಯ ಮಾಡುತ್ತದೆ.
ಸೊಪ್ಪು ತರಕಾರಿಗಳು
ಸೊಪ್ಪು ತರಕಾರಿಗಳು ಹೆಚ್ಚು ಶೀತ ಗುಣವನ್ನು ಹೊಂದಿದೆ. ಉಷ್ಣ ಹವೆಗೆ ಶೈತ್ಯ ತರಕಾರಿಗಳ ಸೇವನೆ ಉತ್ತಮ. ಇದು ಹೊಟ್ಟೆಗೂ ತಂಪು, ದೇಹಕ್ಕೂ ಬೇಕಾದ ಪೋಷಕಾಂಶ ಒದಗಿಸುತ್ತದೆ.
ಕಲ್ಲಂಗಡಿಹಣ್ಣು
ದಿನಕ್ಕೊಂದು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದರೆ ಬಾಯಾರಿಕೆ ನಿವಾರಣೆಯಾಗುವುದು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚು. ಹೀಗಾಗಿ ಬೇಸಿಗೆಯ ಉಷ್ಣ ಹವೆಯಿಂದಾಗಿ ಬರುವ ಉರಿಮೂತ್ರದಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಸೌತೇಕಾಯಿ
ಕಣ್ಣು ಉರಿಯುತ್ತಿದ್ದರೆ, ಸೌತೇಕಾಯಿಯನ್ನು ಬಿಲ್ಲೆಗಳಾಗಿ ಮಾಡಿಕೊಂಡು ಕಣ್ಣಿಗಿಟ್ಟುಕೊಂಡು ಕುಳಿತರೆ ಸಾಕು. ಅಲ್ಲದೆ, ಸೌತೇಕಾಯಿ ಜ್ಯೂಸ್ ಮಾಡಿ ಕುಡಿಯುವುದು, ಅಥವಾ ಊಟದ ಜತೆಗೆ ಹಾಗೇ ತಿನ್ನುವುದರಿಂದ ದೇಹ ತಂಪಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ