Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯರು ಬದನೆಕಾಯಿ ತಿನ್ನಲೇಬೇಕು ಯಾಕೆ ಗೊತ್ತಾ?

ಮಹಿಳೆಯರು ಬದನೆಕಾಯಿ ತಿನ್ನಲೇಬೇಕು ಯಾಕೆ ಗೊತ್ತಾ?
Bangalore , ಶುಕ್ರವಾರ, 21 ಜುಲೈ 2017 (09:22 IST)
ಬೆಂಗಳೂರು: ಬದನೆ ಕಾಯಿ ಕೊಂಚ ಕಹಿ ರುಚಿ ಕೊಡುತ್ತದೆ. ಆದರೆ ಅದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಕೊಡುವ ಸಿಹಿ ಫಲ ಮಾತ್ರ ಅಪಾರವಾದುದು.


ರಕ್ತ ಹೀನತೆಗೆ
ಬದನೆಕಾಯಿಗೆ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ವೃದ್ಧಿಸುವ ಶಕ್ತಿಯಿದೆ. ಇದರಲ್ಲಿ ಕಬ್ಬಿಣದಂಶವೂ ಹೇರಳವಾಗಿರುವುದರಿಂದ ರಕ್ತ ಹೀನತೆಯನ್ನು ದೂರ ಮಾಡುತ್ತದೆ. ವಿಶೇಷವಾಗಿ ಈ ಕಾರಣಕ್ಕಾಗಿಯೇ ಮಹಿಳೆಯರಿಗೆ ಇದು ಹೇಳಿ ಮಾಡಿಸಿದ ತರಕಾರಿ.

ಹೃದಯದ ಸ್ನೇಹಿತ
ಬದನೆಕಾಯಿಯಲ್ಲಿ ಬೇಡದ ಕೊಬ್ಬಿನಂಶ ನಿವಾರಿಸುವ ಗುಣವಿದೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಬದನೆ ಕಾಯಿ ಸೇವನೆ ಉತ್ತಮ.

ಜೀರ್ಣವಾಗಲು
ಇದರಲ್ಲಿರುವ ನಾರಿನಂಶ ನಮ್ಮ ಜೀರ್ಣ ಪ್ರಕ್ರಿಯೆಗೆ ಸಹಕಾರಿ. ಮಲಬದ್ಧತೆ ಅಥವಾ ಬೇದಿಯಂತಹ ಜೀರ್ಣಕ್ರಿಯೆಗೆ ಸಂಬಂಧಿತ ರೋಗಗಳು ಬಾರದಂತೆ ನಮ್ಮನ್ನು ಕಾಪಾಡುತ್ತದೆ.

ತೂಕ ಕಳೆದುಕೊಳ್ಳಲು
ಮೊದಲೇ ಹೇಳಿದಂತೆ ಇದರಲ್ಲಿ ಬೇಡದ ಕೊಬ್ಬಿನಂಶ ಕರಗಿಸುವ ಶಕ್ತಿಯಿದೆ. ಹಾಗಾಗಿ ಬೊಜ್ಜು ಕರಗಿಸಲು ಬಯಸುವವರು ಇದನ್ನು ಧಾರಾಳವಾಗಿ ತಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವೂ ಕಡಿಮೆಯಿರುವುದರಿಂದ ತೂಕ ಕಳೆದುಕೊಳ್ಳಲು ಬಯಸುವರು ತಿನ್ನಲಡ್ಡಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?