Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆಯಸ್ಸು! ಕಾರಣವೇನು ಗೊತ್ತಾ?

ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆಯಸ್ಸು! ಕಾರಣವೇನು ಗೊತ್ತಾ?
ನವದೆಹಲಿ , ಶುಕ್ರವಾರ, 12 ಜನವರಿ 2018 (08:40 IST)
ನವದೆಹಲಿ: ನಮ್ಮಲ್ಲಿ ತಮಾಷೆಗೆ ಪತಿಗಿಂತ ಪತಿಯೇ ಹೆಚ್ಚು ಆಯಸ್ಸು ಹೊಂದಿರುತ್ತಾಳೆ ಎನ್ನುತ್ತಾರೆ. ಆದರೆ ಇದು ನಿಜವಂತೆ! ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಆಯಸ್ಸು. ಅದಕ್ಕೆ ಕಾರಣವನ್ನೂ ಸಂಶೋಧಕರು ನೀಡಿದ್ದಾರೆ.
 

ಅಧ್ಯಯನವೊಂದರ ಪ್ರಕಾರ ಮಹಿಳೆಯರು ಪುರುಷರಿಗೆ ಹೋಲಿಸಿದರೆ ಜೈವಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ. ಸಾಮಾನ್ಯ ನೋವು, ಮಾನಸಿಕವಾಗಿ ಕಠಿಣ ಪರಿಸ್ಥಿತಿಗಳಲ್ಲೂ ಮಹಿಳೆಯರು ಪುರುಷರಿಗಿಂತ ಸ್ಟ್ರಾಂಗ್ ಆಗಿರ್ತಾರೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ನವಜಾತ ಶಿಶುಗಳ ಮರಣ ವಿಚಾರದಲ್ಲೂ ಹೆಣ್ಣು ಮಗು ಗಂಡು ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಬದುಕುಳಿಯುತ್ತಾಳಂತೆ. ಇದೇ ಸದೃಢತೆ ಹೆಣ್ಣು ಮಕ್ಕಳು ಬೆಳೆದ ಮೇಲೂ ಮುಂದುವರಿಯುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.  ಇದರಿಂದಾಗಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ, ಶಕ್ತಿಯುತ ಜೀನ್ ಗಳು ತುಂಬಾ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಅವರು ಹೆಚ್ಚು ಸಮಯ ಬದುಕಿರುತ್ತಾರೆ ಎಂದಿದ್ದಾರೆ ಅಧ್ಯಯನಕಾರರು. ಅಂತೂ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ..!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಚರ್ಮ ಸುಕ್ಕುಗಟ್ಟದಂತೆ ತಡೆಯಬೇಕಾ...? ಹಾಗಾದರೆ ಈ ಮನೆಮದ್ದನ್ನು ಬಳಸಿ