ನವದೆಹಲಿ: ಸೆಕ್ಸ್ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರು ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ.
ಮಾಂಟ್ರಿಯಲ್ ನ ಮೆಕ್ ಗಿಲ್ ವಿವಿ ಅಧ್ಯಯನಕಾರರು ಈ ಹೊಸ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮಿಲನ ಕ್ರಿಯೆ ಸಂದರ್ಭ ಮಹಿಳೆಯರ ಮೆದುಳು ಪುರುಷರಿಗಿಂತ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಸಂಶೋಧಕರು ವಿಶೇಷ ಬ್ರೈನ್ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಕಂಡುಕೊಂಡಿದ್ದಾರೆ.
ಉದ್ರೇಕಕಾರಿ ಸ್ಥಿತಿಯಲ್ಲಿ ಪುರುಷರ ಮೆದುಳಿನ ಕೆಲವು ಭಾಗಗಳು ಕೆಲಸ ಮಾಡುವುದೇ ಇಲ್ಲ. ಆದರೆ ಮಹಿಳೆಯರ ಮೆದುಳಿನಲ್ಲಿ ಕೆಲವು ಭಾಗಗಳಲ್ಲಿ ತೀವ್ರ ಸಂಚಲನ ಕಂಡುಬರುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ