ಬೆಂಗಳೂರು: ಎಲ್ಲರಿಗೂ ಇದೇ ಪ್ರಾಬ್ಲಂ. ಹೆರಿಗೆ ನಂತರ ತನ್ನ ಝೀರೋ ಸೈಝ್ ದೇಹ ಹೋಗಿ ಗಜಗಾಮಿನಿಯಾಗಿಬಿಟ್ಟೆನಲ್ಲಾ ಅಂತ. ಹೆರಿಗೆಯ ನಂತರ ಮಹಿಳೆಯ ತೂಕ ಹೆಚ್ಚುವುದೇಕೆ?
ಅದಕ್ಕೆ ಕಾರಣವಿದೆ ಅಂತಾರೆ ಸಂಶೋಧಕರು. ಗರ್ಭಿಣಿಯಾಗಿದ್ದಾಗ ಥರ ಥರದ ಆಹಾರ ಸೇವಿಸುವುದೊಂದೇ ಇದಕ್ಕೆ ಕಾರಣವಲ್ಲವಂತೆ. ಮಕ್ಕಳನ್ನು ನೋಡಿಕೊಳ್ಳುವ ಭರದಲ್ಲಿ ಅಮ್ಮಂದಿರು ತಮ್ಮ ಆರೋಗ್ಯ ಕಡೆಗಣಿಸುತ್ತಾರೆ. ಸರಿಯಾಗಿ ವ್ಯಾಯಾಮ ಮಾಡದೇ, ಕುಳಿತಲ್ಲಿಯೇ ಕೂರುವುದರಿಂದ, ನಿದ್ದೆಗೆಡುವುದರಿಂದ ಬೊಜ್ಜಿನ ಸಮಸ್ಯೆ ತಾನಾಗಿಯೇ ಬರುತ್ತದೆ ಎನ್ನುತ್ತಾರೆ ಮಿಚಿಗನ್ ವಿವಿಯ ಸಂಶೋಧಕರು.
ರಾತ್ರಿಯಿಡೀ ನಿದ್ದೆಗೆಟ್ಟು ಕೂರುವುದು, ಹೊತ್ತಲ್ಲದ ಹೊತ್ತಿನಲ್ಲಿ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿರುವುದು ಬೊಜ್ಜಿಗೆ ಕಾರಣವಾಗುತ್ತದೆ. ಇನ್ನು ಕೆಲವರು ಹೆರಿಗೆಯ ನಂತರ ಕೆಲವೇ ದಿನ ವ್ಯಾಯಾಮ ನಡೆಸಿ ಫಲಿತಾಂಶ ಸಿಗದಿದ್ದಾಗ ನಿಲ್ಲಿಸುವುದರಿಂದ ಬೊಜ್ಜು ಬರುತ್ತದೆ ಎಂದಿದ್ದಾರೆ ಸಂಶೋಧಕರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.