ಬೆಂಗಳೂರು: ಬೆಳಿಗ್ಗೆ ಅಥವಾ ಸಂಜೆ ದೈಹಿಕ ಕಸರತ್ತು ಮಾಡುವಾಗ ಜಾಗಿಂಗ್ ಮಾಡುವುದು ಮತ್ತು ಓಡಿದರೆ ಹಸಿವಾದ ಅನುಭವವಾಗುತ್ತದೆ. ಯಾಕೆ ಹೀಗೆ? ಅದಕ್ಕೆ ಕಾರಣವಿದೆ.
ಓಡುವುದು ಒಂದು ಉತ್ತಮ ದೈಹಿಕ ಕಸರತ್ತು. ಇದರಿಂದ ದೇಹಕ್ಕೆ ಅಗತ್ಯವಿಲ್ಲದ ಕ್ಯಾಲೋರಿ ನಾಶಗೊಳಿಸಬಹುದು. ಕ್ಯಾಲೋರಿ ನಷ್ಟವಾಗುವುದೆಂದರೆ, ಹಸಿವಾಗುವುದು ಎಂದೇ ಅರ್ಥ.
ಹೀಗೆ ಓಡಿದಾಗ ಹೆಚ್ಚು ಹಸಿವಿನ ಅನುಭವವಾಗುವುದು ಡಯಟ್ ನಲ್ಲಿದ್ದವರಗೆ. ಡಯಟ್ ಮಾಡುವಾಗ ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸುತ್ತೀರಿ. ಇದರಿಂದಾಗಿ ಬೇಗನೇ ಹಸಿವಾಗುತ್ತದೆ.
ಹಾಗಂತ ಹಸಿವನ್ನು ತಡೆದುಕೊಂಡು ಕೂರುವುದೂ ತಪ್ಪು. ನಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಅಗತ್ಯವಿದೆ ಎನ್ನುವಾಗ ಹಸಿವಾಗುತ್ತದೆ. ಆದರೆ ಆಗ ಆಹಾರ ಸೇವಿಸದೇ ಇದ್ದರೆ, ಅದೂ ದೇಹದ ಮೇಲೆ ಇನ್ನೊಂದು ರೀತಿಯಲ್ಲಿ ಪರಿಣಾಮ ಬೀರಬಹುದು. ಹಾಗಾಗಿ ಓಡಿದ ಮೇಲೆ ಹೊಟ್ಟೆಯನ್ನು ಮರೆತುಬಿಡಬೇಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ