Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಳಿಗಾಲದಲ್ಲಿ ನೆಲ್ಲಿಕಾಯಿ ಯಾಕೆ ತಿನ್ನಬೇಕು

ಚಳಿಗಾಲದಲ್ಲಿ ನೆಲ್ಲಿಕಾಯಿ ಯಾಕೆ ತಿನ್ನಬೇಕು
ಬೆಂಗಳೂರು , ಶನಿವಾರ, 13 ನವೆಂಬರ್ 2021 (13:10 IST)
ಚಳಿಗಾಲದಲ್ಲಿ ಆರೋಗ್ಯವು ಪದೇ ಪದೇ ಕೈಕೊಡಬಹುದು. ಈ ಸಂದರ್ಭದಲ್ಲಿ ಕೆಲವು ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಸೇವನೆ ಮಾಡಿದರೆ ಅದರಿಂದ ಆರೋಗ್ಯವು ಉತ್ತಮವಾಗಿರುವುದು.
ಚಳಿಗಾಲದಲ್ಲಿ ಕಾಡುವಂತಹ ಶೀತ, ಕೆಮ್ಮು ಇತ್ಯಾದಿಗಳನ್ನು ದೂರವಿಡಲು ಕೆಲವೊಂದು ಮನೆಮದ್ದುಗಳು ಸಹಕಾರಿ ಆಗಿರುವುದು. ಇವುಗಳಲ್ಲಿ ಮುಖ್ಯವಾಗಿ ನೆಲ್ಲಿಕಾಯಿಯು ದೇಹಾರೋಗ್ಯ ಕಾಪಾಡುವಲ್ಲಿ ನಂಬರ್ ವನ್ ಹಣ್ಣು ಎಂದು ಪರಿಗಣಿಸಲಾಗಿದೆ. ಅದನ್ನು ಸೇವನೆ ಮಾಡಿದರೆ ಏನೆಲ್ಲಾ ಲಾಭಗಳು ಇವೆ ಎಂದು ತಿಳಿಯಿರಿ.
ತ್ವಚೆಯ ಆರೋಗ್ಯ
ನೆಲ್ಲಿಕಾಯಿಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ರಕ್ತವನ್ನು ಶುದ್ಧೀಕರಿಸುವುದು ಮತ್ತು ಕಲೆ ರಹಿತ ಪೋಷಣೆಯುಕ್ತ ತ್ವಚೆಗೆ ಸಹಕಾರಿ. ನೆಲ್ಲಿಕಾಯಿಯಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣಗಳು ಇವೆ ಮತ್ತು ಇದನ್ನು ಚಳಿಗಾಲದಲ್ಲಿ ಸೇವನೆ ಮಾಡಬೇಕು.
ತೂಕ ಇಳಿಸಲು
ಚಳಿಗಾಲದಲ್ಲಿ ಚಳಿಗೆ ನಾವು ಬಿಸಿಬಿಸಿಯಾಗಿರುವಂತಹ ರುಚಿಕರ ಆಹಾರವನ್ನು ಎಷ್ಟು ತಿನ್ನುತ್ತೇವೋ ನಮಗೆ ತಿಳಿಯದು. ಹೀಗಾಗಿ ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆಯು ಇರುವುದು. ಆದರೆ ನೆಲ್ಲಿಕಾಯಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಅದರಿಂದ ದೇಹವು ನಿರ್ವಿಷಗೊಳ್ಳುವುದು ಮತ್ತು ತೂಕ ಇಳಿಸಲು ಇದು ಸಹಕಾರಿ.
ಜೀರ್ಣಕ್ರಿಯೆ
ಚಳಿಗಾಲದಲ್ಲಿ ಅಜೀರ್ಣ ಸಮಸ್ಯೆಯು ಹೆಚ್ಚಿನ ಜನರನ್ನು ಕಾಡುವುದು. ನಾವು ಸೇವನೆ ಮಾಡುವಂತಹ ಅತಿಯಾದ ಆಹಾರ ಮತ್ತು ಬಿಸಿ ಆಹಾರಗಳು ಇದಕ್ಕೆ ಕಾರಣವಾಗಿದೆ. ಹೀಗಾಗಿ ಜೀರ್ಣಕ್ರಿಯೆಯು ಸರಿಯಾಗಿ ಇರಲು ನೆಲ್ಲಿಕಾಯಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿ.
ಮಧುಮೇಹ
ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಉತ್ತಮ ಪ್ರಮಾಣದಲ್ಲಿದ್ದು, ಇದು ದೇಹವು ಇನ್ಸುಲಿನ್ ಗೆ ಪ್ರತಿಕ್ರಿಯಿಸಲು ನೆರವಾಗುವುದು. ಮಧುಮೇಹಿಗಳು ನೆಲ್ಲಿಕಾಯಿಯನ್ನು ತಮ್ಮ ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಅದು ತುಂಬಾ ಪರಿಣಾಮಕಾರಿ ಆಗಿರುವುದು.


Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲಕ್ಕೆ ಬಿಸಿ ಬಿಸಿ ಬ್ರೆಡ್ ಪಕೋಡಾ