ಬೆಂಗಳೂರು: ಹೆಣ್ಣುಮಕ್ಕಳಿಗೆ ಇದೊಂದು ಸಮಸ್ಯೆ. ‘ಆ ದಿನ’ ಯಾವಾಗ ಬರುತ್ತದೋ ಎನ್ನುವ ಹೇಳಲಾಗದ ಚಡಪಡಿಕೆ. ಕೆಲವೊಮ್ಮೆ ನಿಗದಿತ ದಿನಕ್ಕಿಂತಲೂ ಋತುಸ್ರಾವ ತಡವಾಗವುದೇಕೆ ಎನ್ನುವುದಕ್ಕೆ ಹಲವು ಕಾರಣಗಳು.
ಒತ್ತಡ: ಒತ್ತಡ ನಮ್ಮ ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರಲ್ಲಿ ಇದೂ ಒಂದು. ಒತ್ತಡದಿಂದಾಗಿ ನಮ್ಮ ದೇಹದಲ್ಲಿ ಜಿಎನ್ ಆರ್ ಎಚ್ ಎನ್ನುವ ಹಾರ್ಮೋನ್ ಉತ್ಪಾದನೆ ಕುಂಠಿತವಾಗುತ್ತದೆ. ಇದರಿಂದ ಮುಟ್ಟು ತಡವಾಗುತ್ತದೆ.
ಅನಾರೋಗ್ಯ: ಶೀತ, ಕೆಮ್ಮು, ಜ್ವರದಂತಹ ಸಾಮಾನ್ಯ ರೋಗಗಳು ಮುಟ್ಟು ತಡವಾಗುವುದಕ್ಕೆ ಕಾರಣವಾಗಬಹುದು.
ದೈನಂದಿನ ಬದಲಾವಣೆ: ದಿನಚರಿಯಲ್ಲಿ ಬದಲಾವಣೆ, ಮನೆಯಲ್ಲಿ ಏನೋ ಕಾರ್ಯಕ್ರಮಗಳು, ರಾತ್ರಿ ನಿದ್ರೆ ಸರಿಯಾಗಿ ಆಗದೇ ಇರುವುದು ಇಂತಹ ಬದಲಾವಣೆಗಳು ಋತುಸ್ರಾವದ ಮೇಲೆ ಪರಿಣಾಮ ಬೀರಬಹುದು.
ಗರ್ಭನಿರೋಧಕ ಮಾತ್ರೆಗಳು: ಕೆಲವು ಮಾತ್ರೆಗಳು ಋತು ಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ಸ್ರಾವ, ಅನಿಯಮಿತ ಮುಟ್ಟಾಗುತ್ತಿದ್ದರೆ, ವೈದ್ಯೆರನ್ನು ಸಂಪರ್ಕಿಸಬೇಕು.
ಥೈರಾಯ್ಡ್ ಸಮಸ್ಯೆ: ಥೈರಾಯ್ಡ್ ಗ್ರಂಥಿ ಅಸಹಜವಾಗಿದ್ದರೆ ಮುಟ್ಟಿನ ಮೇಲೆ ಪರಿಣಾಮವಾಗುತ್ತದೆ. ಇದು ನಮ್ಮ ದೇಹದ ಪ್ರಕ್ರಿಯೆಗಳನ್ನು ಸಹಜವಾಗಿಡುವ ಗ್ರಂಥಿ. ಅದು ಸರಿಯಾಗಿರದಿದ್ದರೆ, ಅನಿಯಮಿತ ಮುಟ್ಟಿನ ಸಮಸ್ಯೆ ಎದುರಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ