ಬೆಂಗಳೂರು: ಕೆಲವು ಆಹಾರ ವಸ್ತುಗಳು ಎಷ್ಟೇ ಆರೋಗ್ಯಕ್ಕೆ ಒಳ್ಳೆಯದಾದರೂ, ಕೆಲವೊಂದು ಸಮಯದಲ್ಲಿ ಸೇವಿಸಿದರೆ ಅದು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದು. ಬಾಳೆಹಣ್ಣು ಕೂಡಾ ಅಂತಹ ಗುಂಪಿಗೆ ಸೇರುತ್ತದೆ.
ಬಾಳೆಹಣ್ಣು ಶಕ್ತಿವರ್ಧಕ, ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂಬುದೇನೋ ನಿಜ. ಆದರೆ ಬಾಳೆ ಹಣ್ಣನ್ನು ರಾತ್ರಿ ಸೇವಿಸುವುದು ಸುರಕ್ಷಿತವಲ್ಲ ಎಂದು ಆಯುರ್ವೇದವೇ ಹೇಳುತ್ತದೆ.
ಇದಕ್ಕೆ ಕಾರಣ ಬಾಳೆಹಣ್ಣು ತಂಪು ಮತ್ತು ಹುಳಿ ಗುಣ ಹೊಂದಿದೆ. ಇದನ್ನು ರಾತ್ರಿ ಸೇವಿಸುವುದರಿಂದ ಶೀತ, ಕೆಮ್ಮು, ಕಫ ಸಮಸ್ಯೆ ಬರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಬೆಳಿಗ್ಗೆ ಮತ್ತು ಹಗಲು ಹೊತ್ತು ಬಾಳೆಹಣ್ಣು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನ್ನುವುದು ತಜ್ಞರ ಅಭಿಮತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.