ಬೆಂಗಳೂರು: ಶುಭ ಕಾರ್ಯಕ್ಕೆ ಹೊರಡುವಾಗ ಸಕ್ಕರೆ ಮತ್ತು ಮೊಸರು ಸೇವಿಸಿದರೆ ಕೈಗೊಂಡ ಕೆಲಸಗಳು ನೆರವೇರುತ್ತವೆ, ಶುಭವಾಗುತ್ತದೆ ಎಂಬ ನಂಬಿಕೆಯಿದೆ.
ಇದು ಕೇವಲ ನಂಬಿಕೆ ಮಾತ್ರವಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಎಂದರೆ ನೀವು ನಂಬಲೇ ಬೇಕು. ಭಾರತೀಯರ ಈ ಸಂಪ್ರದಾಯ ದೇಹಕ್ಕೂ ಒಳ್ಳೆಯದನ್ನು ಮಾಡುತ್ತದೆ.
ಮೊಸರು ಮತ್ತು ಸಕ್ಕರೆಯನ್ನು ಜತೆಯಾಗಿ ಸೇವಿಸುವುದರಿಂದ ದೇಹ ಲವಲವಿಕೆಯಿಂದಿರಲು ಬೇಕಾದ ಪೋಷಕಾಂಶ ಸಿಗುತ್ತದೆ. ಅಲ್ಲದೆ ಹೆಚ್ಚು ಹೊತ್ತು ಹಸಿವು ಇಂಗಿಸುತ್ತದೆ. ಜೀರ್ಣಕ್ರಿಯೆಗೂ ಸಹಕರಿಸುತ್ತದೆ. ಪರೀಕ್ಷೆ, ಸಂದರ್ಶನಕ್ಕೆ ತೆರಳುವವರಿಗೆ ಇದು ಒಂದು ರೀತಿಯಲ್ಲಿ ಡಯಟ್ ಫುಡ್. ಹಾಗಾಗಿ ಶುಭ ಕಾರ್ಯಕ್ಕೆ ಮೊದಲು ಮೊಸರು, ಸಕ್ಕರೆ ಸೇವಿಸಿದರೆ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ