ಬೆಂಗಳೂರು : ಖರ್ಜೂರ ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಒಣ ಖರ್ಜೂರ ಮತ್ತು ಹಸಿ ಖರ್ಜೂರ ಇವೆರಡರಲ್ಲಿ ಯಾವುದು ಉತ್ತಮ ಎಂಬ ಮಾಹಿತಿ ಇಲ್ಲಿದೆ ನೋಡಿ.
*ಒಣ ಖರ್ಜೂರ : 100ಗ್ರಾಂ ಒಣ ಖರ್ಜೂರದಲ್ಲಿ 280 ಕ್ಯಾಲೋರಿಸ್ ಇರುತ್ತದೆ. ಇದು ತೂಕ ಹೆಚ್ಚಿಸಿಕೊಳ್ಳುವವರಿಗೆ ಸಹಕಾರಿ.
ಒಣ ಖರ್ಜೂರವನ್ನು ಹಾಲಿನ ಜೊತೆಗೆ ಸೇವಿಸಿದರೆ ಅವರ ತೂಕ ಹೆಚ್ಚಳವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶವಿರುತ್ತದೆ.
*ಹಸಿ ಖರ್ಜೂರ : ಇದರಲ್ಲಿ 145 ಕ್ಯಾಲೋರಿಸ್ ಇರುತ್ತದೆ. ಇದು ತೂಕ ಕಡಿಮೆ ಮಾಡಲು ಸಹಕಾರಿ. ಇದನ್ನು ಸೇವಿಸಿದರೆ ಹೊಟ್ಟೆ ತುಂಬಿದಂತಾಗುವುದರಿಂದ ಹಸಿವಾಗುವುದನ್ನು ತಡೆಯುತ್ತದೆ.