ಬೆಂಗಳೂರು: ಅಸಿಡಿಟಿ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಬೇಸಿಗೆಯಲ್ಲಿ ಹೊಟ್ಟೆ ಉರಿ, ಎದೆ ಉರಿಯಂತಹ ಸಮಸ್ಯೆಗಳು ಸಹಜ. ಇವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಎಂತಹ ಆಹಾರ ಸೇವಿಸಬೇಕು ಎಂದು ನೋಡಿಕೊಳ್ಳಿ.
ಬಾಳೆಹಣ್ಣು
ಬಾಳೆ ಹಣ್ಣಿನಲ್ಲಿ ಪೊಟೇಷಿಯಂ ಅಂಶ ಹೆಚ್ಚಾಗಿದ್ದು, ಮಲ ವಿಸರ್ಜನೆ ಸುಗಮಗೊಳಿಸುತ್ತದೆ. ಅಲ್ಲದೆ ಇದರಲ್ಲಿ ನಾರಿನಂಶ ಹೆಚ್ಚಿದ್ದು, ಜೀರ್ಣಕ್ರಿಯೆಗೂ ಸುಲಭ
ಕಲ್ಲಂಗಡಿ ಹಣ್ಣು
ದೇಹದಲ್ಲಿ ನೀರಿನಂಶ ಕಡಿಮೆ ಆದ ಹಾಗೆ ಅಸಿಡಿಟಿ ಸಮಸ್ಯೆಯೂ ಹೆಚ್ಚುತ್ತದೆ. ಹಾಗಾಗಿ ಅಧಿಕ ದ್ರವಾಂಶ ಹೊಂದಿರುವ ಕಲ್ಲಂಗಡಿ ಹಣ್ಣನ್ನು ಯಥೇಚ್ಛವಾಗಿ ಸೇವಿಸಿ.
ಎಳೆನೀರು
ಎಳೆ ನೀರು ಹೊಟ್ಟೆ ತಂಪಾಗಿಸುತ್ತದೆ. ಇದು ಒಂಥರಾ ಗ್ಲುಕೋಸ್ ನಂತೆ ಕೆಲಸ ಮಾಡುವುದು. ನಿತ್ರಾಣರಾಗದಂತೆ ನೋಡಿಕೊಳ್ಳುವುದಲ್ಲದೆ, ದೇಹದಲ್ಲಿ ದ್ರವಾಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು.
ತಂಪು ಹಾಲು
ತಂಪಾದ ಹಾಲು ಅಥವಾ ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆಯುರಿಂತಹ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ