ಬೆಂಗಳೂರು: ಪುರುಷರ ಶಿಷ್ನದಲ್ಲಿ ಕೆಲವೊಮ್ಮೆ ವಿಪರೀತ ಕೆಟ್ಟ ವಾಸನೆ ಬರುತ್ತಿದ್ದರೆ ಅದಕ್ಕೆ ಹಲವು ವಿಚಾರಗಳು ಕಾರಣವಾಗುತ್ತದೆ. ಅವು ಯಾವುವು ನೋಡೋಣ.
ಶುಚಿತ್ವ
ಗುಪ್ತಾಂಗದ ಶುಚಿತ್ವ ತುಂಬಾ ಮುಖ್ಯ. ಶಿಷ್ನವನ್ನು ಸರಿಯಾಗಿ ಶುಚಿಗೊಳಿಸದೇ ಹೋದರೆ ಅಲ್ಲಿ ನೈಸರ್ಗಿಕವಾಗಿ ತೇವಾಂಶ ಹೊರಸೂಸುವ ಅಂಗಾಂಶ ಸಾಯುವುದರಿಂದ ದುರ್ವಾಸನೆ ಬರಬಹುದು.
ರೋಗದ ಲಕ್ಷಣ
ಶಿಷ್ನ, ಗುಪ್ತಾಂಗ ವಿಪರೀತ ವಾಸನೆ ಬರುತ್ತಿದ್ದರೆ, ಅದು ಲೈಂಗಿಕ ರೋಗದ ಲಕ್ಷಣಗಳಿರಬಹುದು. ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಸೋಂಕು
ತುರಿಕೆ, ಉರಿ ಬಂದಂತಾಗುವುದು ಆಗುತ್ತಿದ್ದರೆ ಶಿಷ್ನಕ್ಕೆ ಸೋಂಕು ಉಂಟಾಗಿದೆ ಎಂದೇ ಅರ್ಥ. ಇದರಿಂದಾಗಿ ಶಿಷ್ನದಲ್ಲಿ ತೇವಾಂಶ ಸಂಗ್ರಹವಾಗುತ್ತದೆ. ಇದರಿಂದ ಸಹಜವಾಗಿ ವಾಸನೆ ಉಂಟಾಗುತ್ತದೆ.
ಮೂತ್ರ ಸಮಸ್ಯೆ
ಮೂತ್ರ ಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು, ಮೂತ್ರ ಸೋಂಕು ಸಮಸ್ಯೆಗಳೂ ಕೆಟ್ಟ ವಾಸನೆಗೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.