ಬೆಂಗಳೂರು: ಡ್ರೈ ಫ್ರೂಟ್ಸ್ ನಮ್ಮ ದೇಹಕ್ಕೆ ಹಲವು ರೀತಿಯಿಂದ ಒಳ್ಳೆಯದನ್ನು ಮಾಡುತ್ತದೆ. ಸಾಕಷ್ಟು ಪೌಷ್ಠಿಕಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ಯಾವಾಗ ಸೇವಿಸಿದರೆ ಉತ್ತಮ ನೋಡೋಣ.
ಬೆಳಿಗ್ಗೆ: ಬಾದಾಮಿ ತಿನ್ನಲು ಬೆಳಗಿನ ಸಮಯವೇ ಉತ್ತಮ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಬೀಜ ತಿನ್ನುವುದು ಉತ್ತಮ.
ಸಂಜೆ: ಪಿಸ್ತಾ, ಗೇರು ಬೀಜ, ಪೀನಟ್ ಗಳಂತಹ ಒಣ ಹಣ್ಣುಗಳನ್ನು ಸಂಜೆ ಸಮಯದಲ್ಲಿ ತಿನ್ನುವುದು ಸೂಕ್ತ. ದಿನವಿಡೀ ಕೆಲಸ ಮಾಡಿ ಸುಸ್ತಾದಾಗ ಸಂಜೆ ಶಕ್ತಿ ತುಂಬಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಸಮಯದಲ್ಲಿ ಈ ಹಣ್ಣುಗಳನ್ನು ಸೇವಿಸಬಹುದು.
ರಾತ್ರಿ: ವಾಲ್ ನಟ್, ಖರ್ಜೂರ ಮುಂತಾದವುಗಳನ್ನು ರಾತ್ರಿ ವೇಳೆ ತಿನ್ನುವುದು ಸೂಕ್ತ. ಇವುಗಳಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆ ದೂರ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ