Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಗುವಿಗೆ ಲಾಲಿ ಹಾಡು ಹಾಡುವುದರ ಪ್ರಯೋಜನಗಳೇನು ಗೊತ್ತಾ?

ಮಗುವಿಗೆ ಲಾಲಿ ಹಾಡು ಹಾಡುವುದರ ಪ್ರಯೋಜನಗಳೇನು ಗೊತ್ತಾ?
Bangalore , ಮಂಗಳವಾರ, 21 ಫೆಬ್ರವರಿ 2017 (11:39 IST)
ಬೆಂಗಳೂರು: ಅಮ್ಮ ತನ್ನ ಮುದ್ದು ಕಂದಮ್ಮನನ್ನು ಲಾಲಿ ಹಾಡು ಹಾಡಿ ಮಲಗಿಸುವುದು ಸಾಮಾನ್ಯ. ಅಮ್ಮನ ಸ್ವರ ಚೆಂದವೋ, ಮಮತೆಯೋ ಒಟ್ಟಾರೆ ತೊಟ್ಟಿಲಲ್ಲಿರುವ ಕಂದಮ್ಮನನ್ನು ಮುಗ್ಧವಾಗಿ ನಕ್ಕು ಮಲಗುವುದು. ಅಂತಹ ಶಕ್ತಿಯಿದೆ ಲಾಲಿ ಹಾಡಿಗೆ.

 
ಲಾಲಿ ಹಾಡು ಹಾಡುವುದು ಮಗು ಮತ್ತು ತಾಯಿಯ ಆರೋಗ್ಯಕ್ಕೆ ಒಳ್ಳೆಯದು ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಲಾಲಿ ಹಾಡು ಕೇಳುವ ಮಗುವಿನ ಸಂವೇದನೆಗಳು ಚುರುಕಾಗುತ್ತವೆ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಅಲ್ಲದೆ ಇದರಿಂದ ತಾಯಿ ಮತ್ತು ಮಗುವಿನ ಸಂಬಂಧ ಗಟ್ಟಿಯಾಗುತ್ತದೆ.

ಹೊಸದಾಗಿ ಹೆತ್ತವಳಾದ ಅಮ್ಮನಿಗೆ ಏನೇನೋ ಒತ್ತಡಗಳಿರುತ್ತವೆ. ಈ ಭಾವನೆಗಳು ಮತ್ತು ಒತ್ತಡಗಳನ್ನು ನಿಯಂತ್ರಣದಲ್ಲಿರಿಸಲು ಲಾಲಿ ಹಾಡು ಪ್ರಮುಖ ಪಾತ್ರ ವಹಿಸುತ್ತದೆ. ಅಮ್ಮ ಹಾಡುವ ಲಾಲಿ ಹಾಡು ಶೃತಿ ಬದ್ಧವಾಗಿಲ್ಲದಿದ್ದರೂ ಪರವಾಗಿಲ್ಲ. ಮಗು ಅಮ್ಮನ ಧ್ವನಿಯನ್ನು ಗುರುತಿಸುತ್ತದೆ ಮತ್ತು ಇಷ್ಟಪಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮದ ರಕ್ಷಣೆಗೆ ಸರಳ ಮನೆ ಉಪಾಯಗಳು