ಬೆಂಗಳೂರು: ಕಣ್ಣು ಅವಿಭಾಜ್ಯ ಅಂಗ. ಅದರ ಆರೋಗ್ಯಕ್ಕೆ ಏನು ಮಾಡಬೇಕು? ಯಾವ ಆಹಾರ ಸೇವಿಸಿದರೆ ಉತ್ತಮ? ನೋಡೋಣ.
ಕಾಫಿ ಚಹಾ, ಮಸಾಲೆ, ಮೆಣಸು, ಉಪ್ಪಿನಕಾಯಿ, ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರ, ಎಣ್ಣೆಯಲ್ಲಿ ಕರಿದ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಲ್ಲದೆ, ರಾತ್ರಿ ನಿದ್ರೆಗೆಡುವುದು, ಟಿವಿ ನೋಡುತ್ತಿರುವುದು, ರಾತ್ರಿ ವೇಳೆ ಅತಿಯಾದ ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವುದು ಕೂಡಾ ಕಣ್ಣಿನ ಆರೋಗ್ಯಕ್ಕೆ ಹಾನಿಕಾರಕ.
ಕಣ್ಣಿನ ಆರೋಗ್ಯ ಹೆಚ್ಚಿಸಲು ಕ್ಯಾರೆಟ್, ಕಿತ್ತಳೆ, ಪಪ್ಪಾಯದಂತಹ ಹಣ್ಣು, ಸೊಪ್ಪು ತರಕಾರಿಗಳನ್ನು ಆದಷ್ಟು ಸೇವಿಸಿ. ಇನ್ನು, ಕಂಪ್ಯೂಟರ್ ಮತ್ತು ಟಿವಿ ನೋಡುವಾಗ ಸಮಾನ ಎತ್ತರದಲ್ಲಿ, ಮತ್ತು ಅಂತರದಲ್ಲಿ ನೋಡಿ. ಕಣ್ಣಿಗೆ ಆದಷ್ಟು ಸುಸ್ತಾದಗದಂತೆ ನೋಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.