ಬೆಂಗಳೂರು : ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ಅಭ್ಯಾಸ. ಇದ್ರಿಂದ ಲೈಂಗಿಕ ರೋಗ ಹರಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ತಜ್ಞರು ಮಾತ್ರ ಮಹಿಳೆಯರ ನಂಬಿಕೆ ತಪ್ಪು ಎನ್ನುತ್ತಿದ್ದಾರೆ.
ಶಾರೀರಿಕ ಸಂಬಂಧದ ನಂತ್ರ ಶೌಚಾಲಯಕ್ಕೆ ಹೋಗುವುದು ಒಳ್ಳೆಯ ಸಂಗತಿ. ಆದ್ರೆ ಸಂಬಂಧ ಬೆಳೆಸುವ ಮುನ್ನ ಶೌಚಾಲಯಕ್ಕೆ ಹೋದಲ್ಲಿ ಸೋಂಕಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಶಾರೀರಿಕ ಸಂಬಂಧ ಬೆಳೆಸುವ ಮೊದಲು ಮೂತ್ರ ಮಾಡದೆ ಸಂಬಂಧ ಬೆಳೆಸಬೇಕು. ಸಂಭೋಗದ ನಂತ್ರ ಒಂದೇ ಬಾರಿ ಎಲ್ಲ ಮೂತ್ರವನ್ನು ಹೊರಗೆ ಬಿಡಬೇಕು. ಮೂತ್ರಾಶಯದಲ್ಲಿ ಹೆಚ್ಚಿನ ಪ್ರಮಾಣದ ಮೂತ್ರ ಇರುವುದ್ರಿಂದ ವೇಗವಾಗಿ ಅದು ಹೊರಗೆ ಬರುವ ಮೂಲಕ ಮೂತ್ರಾಶಯಕ್ಕೆ ಸೇರಿದ್ದ ಬ್ಯಾಕ್ಟೀರಿಯಾವನ್ನು ಹೊರಗೆ ಬಿಡುತ್ತದೆ.
ಒಂದು ವೇಳೆ ಮೂತ್ರ ಮಾಡಿ ಸಂಬಂಧ ಬೆಳೆಸಿದಲ್ಲಿ ಸಂಬಂಧದ ನಂತ್ರ ಮೂತ್ರ ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಇದ್ರಿಂದ ಮೂತ್ರ ನಿಧಾನವಾಗಿ ಹೊರಗೆ ಬರುತ್ತದೆ. ಹೀಗೆ ಬಂದಾಗ ಮೂತ್ರಾಶಯಕ್ಕೆ ಸೇರಿರುವ ಬ್ಯಾಕ್ಟೀರಿಯಾ ಸರಿಯಾಗಿ ಹೊರಗೆ ಬರದೆ ಸೋಂಕು ಕಾಡುತ್ತದೆ. ಹಾಗೆ ಸೆಕ್ಸ್ ಗಿಂತ ಮೊದಲು ಮೂತ್ರ ಮಾಡಿದಾಗ ಅಲ್ಲಿ ಉಳಿದಿರುವ ಬ್ಯಾಕ್ಟೀರಿಯಾ ಸೆಕ್ಸ್ ವೇಳೆ ಮೂತ್ರಾಶಯ ಸೇರುತ್ತದೆ. ಅದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ