ಬೆಂಗಳೂರು : ನೀರು ಕುಡಿದರೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಆದರೆ ಕೆಲವರಿಗೆ ನೀರು ಕುಡಿಯಲು ಇಷ್ಟವಾಗುವುದಿಲ್ಲ. ಅಂತವರಿಗೆ ಈ ಏಲಕ್ಕಿ ತುಂಬಾ ಉಪಯೋಗಕಾರಿ. ಯಾಕೆಂದರೆ ಏಲಕ್ಕಿ ತಿಂದು ನೀರು ಕುಡಿದರೆ ನೀರು ತುಂಬಾ ರುಚಿಕರ ಎನಿಸುತ್ತದೆ. ಅಲ್ಲದೇ ಈ ಇದರಿಂದ ಆಋಒಗ್ಯ ವೃದ್ಧಿಯಾಗುತ್ತದೆ.
ಹೌದು. ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೇ ಏಲಕ್ಕಿ ತಿಂದು ನೀರು ಕುಡಿಯುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ದೂರವಾಗುತ್ತದೆ. ಅಸ್ತಮಾ ಸಮಸ್ಯೆ ಇರುವವರು ಈ ರೀತಿ ಮಾಡಿದರೆ ಒಳ್ಳೆಯದು. ಇದು ನೆಗಡಿ ಮತ್ತು ಕೆಮ್ಮು ಸಮಸ್ಯೆ ಕಡಿಮೆ ಮಾಡುತ್ತದೆ.
ಮೂತ್ರಕ್ಕೆ ಸಂಬಂಧಪಟ್ಟ ಕಾಯಿಲೆಯನ್ನು ಅದು ನಿವಾರಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆದು ರಕ್ತ ಸಂಚಾರ ಸರಾಗವಾಗಿ ನಡೆಯಲು ಇದು ಸಹಕರಿಸುತ್ತದೆ. ಹೃದಯದ ಆರೋಗ್ಯವನ್ನ ಕಾಪಾಡುತ್ತದೆ. ಅಷ್ಟೇ ಅಲ್ಲದೇ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಏಲಕ್ಕಿಯನ್ನು ಸೇವಿಸಿದರೆ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಇದು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.