Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆಂಪು ಬಾಳೆ ಹಣ್ಣಿನಲ್ಲಿರುವ ಅಗಾಧ ಶಕ್ತಿ ಏನು ಗೊತ್ತಾ?

ಕೆಂಪು ಬಾಳೆ ಹಣ್ಣಿನಲ್ಲಿರುವ ಅಗಾಧ ಶಕ್ತಿ ಏನು ಗೊತ್ತಾ?
Bangalore , ಮಂಗಳವಾರ, 27 ಜೂನ್ 2017 (08:51 IST)
ಬೆಂಗಳೂರು: ಸಾಮಾನ್ಯವಾಗಿ ನಾವು ಬಾಳೆ ಹಣ್ಣು ಖರೀದಿಸುವಾಗ ಹಳದಿ ಸಿಪ್ಪೆಯ ಬಾಳೆ ಹಣ್ಣು ಖರೀದಿ ಮಾಡುತ್ತೇವೆ. ಆದರೆ ಕೆಂಪು ಸಿಪ್ಪೆಯ ಬಾಳೆ ಹಣ್ಣು ತಿಂದು ನೋಡಿ. ನಿಮ್ಮ ಆರೋಗ್ಯಕ್ಕೆ ಅದು ಕೊಡುವ ಬೂಸ್ಟ್ ಬೇರೆಯೇ.

 
ತೂಕ ಇಳಿಸಲು
ಸ್ಥೂಲ ಕಾಯದವರು ದೇಹದ ತೂಕ ಇಳಿಸಬೇಕೆಂದಿದ್ದರೆ ಕೆಂಪು ಬಾಳೆ ಹಣ್ಣು ಸಾಕಷ್ಟು ಸೇವಿಸಿ. ಇದರಲ್ಲಿರುವ ಕಾರ್ಬೋ ಹೈಡ್ರೇಟ್ ಅಂಶ ನಮ್ಮ ನಾಲಿಗೆ ಚಪಲಕ್ಕೂ ಕಡಿವಾಣ ಹಾಕುತ್ತದೆ.

ಮೂತ್ರಪಿಂಡದ ಸಮಸ್ಯೆಗೆ
ಮೂತ್ರಪಿಂಡದ ಕಲ್ಲು ಸಮಸ್ಯೆ ಬಾರದಂತೆ ತಡೆಯಲು ಪೊಟೇಷಿಯಂ ಅಂಶವಿರುವ ಆಹಾರ ಸೇವನೆ ಅಗತ್ಯ. ಇದರಲ್ಲಿ ಪೊಟೇಷಿಯಂ ಜತೆಗೆ ಸಾಕಷ್ಟು ಕ್ಯಾಲ್ಶಿಯಂ ಅಂಶವಿದ್ದು, ಎಲುಬುಗಳ ಬೆಳವಣಿಗೆಗೂ ಸಹಕಾರಿ.

ಧೂಮಪಾನ ಬಿಡಿಸಲು
ಪೊಟೇಷಿಯಂ ಅಂಶ ಧೂಮಪಾನಿಗಳ ಮನಸ್ಸು ಹೆಚ್ಚು ಆ ಕಡೆಗೆ ಸೆಳೆಯದಂತೆ ತಡೆಯುತ್ತದೆ. ಮಾನಸಿಕವಾಗಿ ಶಕ್ತಿ ನೀಡುವುದರಿಂದ ಧೂಮಪಾನ ಮಾಡಬೇಕೆಂದು ನಿಮಗನಿಸದು.

ಚರ್ಮ
ಕೆಂಪು ಬಾಳೆಹಣ್ಣು ಸೇವನೆ ಅಥವಾ ಚರ್ಮಕ್ಕೆ ಬಾಳೆ ಹಣ್ಣು ಲೇಪಿಸಿಕೊಳ್ಳುವುದು ಉತ್ತಮ. ಸ್ವಲ್ಪ ಓಟ್ಸ್ ಪುಡಿ ಮತ್ತು ಜೇನು ತುಪ್ಪದ ಜತೆಗೆ ಕೆಂಪು ಬಾಳೆ ಹಣ್ಣನ್ನು ಕಿವುಚಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು.

ರಕ್ತ ಶುದ್ದೀಕರಿಸಲು
ಈ ಬಾಳೆಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುವುದರಿಂದ ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಗುವಿಗೆ ದನದ ಹಾಲು ನೀಡುತ್ತಿಲ್ಲವೇ? ಹಾಗಿದ್ದರೆ ಈ ಸುದ್ದಿ ಓದಿ