Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಲ್ಲಂಗಡಿ ಹಣ್ಣಿನಲ್ಲಿದೆ ಔಷಧೀಯ ಗುಣ

ಕಲ್ಲಂಗಡಿ ಹಣ್ಣಿನಲ್ಲಿದೆ ಔಷಧೀಯ ಗುಣ
Bangalore , ಗುರುವಾರ, 22 ಡಿಸೆಂಬರ್ 2016 (13:41 IST)
ಬೆಂಗಳೂರು: ಚಳಿಗಾಲ ಹೋಗಿ ಬೇಸಿಗೆ ಬರುವ ಹೊತ್ತಿಗೆ ಕಲ್ಲಂಗಡಿ ಹಣ್ಣು ತಿನ್ನುವವರ ಸಂಖ್ಯೆಯೂ ಜಾಸ್ತಿ. ಬೀದಿ ಬದಿಗಳಲ್ಲಿ ರಾಶಿ ಹಾಕಿ ಮಾರುವವರ ಕಡೆಗೆ ನಮ್ಮ ಕಾಲೆಳೆಯುತ್ತದೆ. ಕಲ್ಲಂಗಡಿ ಹಣ್ಣು ಬಾಯಾರಿಕೆ ನಿವಾರಿಸುವುದು ಮಾತ್ರವಲ್ಲ, ಇನ್ನೂ ಅನೇಕ ಗುಣಗಳನ್ನು ಹೊಂದಿದೆ. ಅದ್ಯಾವುದು ನೋಡೋಣ.


ವಿಟಮಿನ್ ಗಳ ಆಗರ

ಕಲ್ಲಂಗಡಿ ಹಣ್ಣು ಶೇಕಡಾ 92 ರಷ್ಟು ನೀರಿನಂಶ ಹೊಂದಿದೆ. ಇದರಲ್ಲಿ ವಿಟಮಿನ್ ಎ, ಬಿ6 ಮತ್ತು ಸಿ ಹೇರಳವಾಗಿದೆ. ಇದಲ್ಲದೆ ಪೊಟೇಷಿಯಂ, ಆಂಟಿ ಆಕ್ಸಿಡೆಂಟ್ ಕೂಡಾ ಇದೆ. ಇದರಲ್ಲಿರುವ ಪೋಷಕಾಂಶಗಳ ಅಂಶ ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಎಲುಬು ಗಟ್ಟಿಗೊಳಿಸಲು ಸಹಕಾರಿ.

ಅಲ್ಲದೆ ನಿರ್ಜಲೀಕರಣಕ್ಕೊಳಗಾದವರಿಗೆ ಕಲ್ಲಂಗಡಿ ಸೇವನೆ ಉತ್ತಮ. ಇದರಲ್ಲಿ ನಾರಿನಂಶ ಅಧಿಕವಿದ್ದು, ಜೀರ್ಣಕ್ರಿಯೆಗೂ ಒಳ್ಳೆಯದು.  ಇದಲ್ಲದೆ ವಿಟಮಿನ್ ಎ ಅಂಶ ಹೆಚ್ಚಿರುವುದರಿಂದ ಕೂದಲು, ಚರ್ಮದ ರಕ್ಷಣೆಗೆ ಹೇಳಿ ಮಾಡಿಸಿದಂತಹದ್ದು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿರುವುದರಿಂದ ಕ್ಯಾನ್ಸರ್ ರೋಗ ನಿವಾರಕವೂ ಆಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಇದು ಹಾಳಾಗದಂತೆ ರಕ್ಷಿಸಲು ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿ ಮಾರಾಟಕ್ಕಿಡುತ್ತಾರೆ ಎಂಬ ಆಪಾದನೆಯೂ ಇದೆ. ಅದರಲ್ಲೂ ದೊಡ್ಡ ಬಿಳಿ ಬಣ್ಣದ ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಸಿಂಪಡನೆ ಮಾಡುತ್ತಾರೆ ಎನ್ನಲಾಗುತ್ತದೆ. ಅದರ ಹೊರತಾಗಿ ಕಲ್ಲಂಗಡಿ ಹಣ್ಣು ರುಚಿಗೂ ಆರೋಗ್ಯಕ್ಕೂ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ