Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಂತ ಸುರಕ್ಷತೆಗೆ ಈ ದುರಭ್ಯಾಸಗಳನ್ನು ಬಿಟ್ಟು ಬಿಡಿ!

ದಂತ ಸುರಕ್ಷತೆಗೆ ಈ ದುರಭ್ಯಾಸಗಳನ್ನು ಬಿಟ್ಟು ಬಿಡಿ!
, ಗುರುವಾರ, 2 ಫೆಬ್ರವರಿ 2017 (11:06 IST)
ಯಾರು ಆರೋಗ್ಯಕರ ಹಲ್ಲನ್ನು ಬಯಸುವುದಿಲ್ಲ ಹೇಳಿ? ಹೌದು, ಹಲ್ಲಿನ ಆರೋಗ್ಯಕ್ಕೆ ಅವುಗಳ ಆರೋಗ್ಯದ ಕಡೆಗೆ ಗಮನ ನೀಡುವುದು ಅವಶ್ಯ. ಪ್ರತಿದಿನದ ಕೆಲ ಅಭ್ಯಾಸ, ಚಟಗಳು ನಿಮ್ಮ ಹಲ್ಲುಗಳು ಮತ್ತು ವಸಡು ಹಾನಿಯಾಗುವಲ್ಲಿ ಕಾರಣವಾಗಬಲ್ಲವು ಎಂಬುದು ನಿಮಗೆ ಗೊತ್ತೇ? 
 

 
ಹೌದು, ಇಲ್ಲಿದೆ ನಿಮ್ಮ ಹಲ್ಲಿನ ಆರೋಗ್ಯಕ್ಕೆ ಮುಳುವಾಗಬಲ್ಲ ಕೆಲ ವಿಷಯಗಳು:
 
ಫ್ಲಾಸ್ಸಿಂಗ್: ಹಲ್ಲುಗಳ ನಡುವಿನ ಕೊಳೆಯನ್ನು ತೆಗೆಯುವುದು (ಫ್ಲಾಸ್ಸಿಂಗ್) ಅವಶ್ಯ. ಇದರಿಂದ ಬ್ಯಾಕ್ಟಿರಿಯಾಗಳು ಸಹ ದೂರವಾಗುತ್ತವೆ. ಆದರೆ ಈ ನಿಯಮಿತ ಅಭ್ಯಾಸ, ದುರಸ್ತಿ ಮಾಡುವಾಗ ಸಹಿಸಲಾಗದ ನೋವುಂಟು ಮಾಡಬಲ್ಲ ಕಾವಿಟಿಸ್‌ಗಳಿಗೆ ಕಾರಣವಾಗಬಹುದು. 
 
ಹಳೆಯ ಟೂಥ್ ಬ್ರಷ್ ಬಳಕೆ: ಹಳೆಯ ಟೂಥ್ ಬ್ರಷ್ ಬಳಕೆ ಒಳ್ಳೆಯದಲ್ಲ. ಇದು ಹಾನಿಕಾರಕ ಬ್ಯಾಕ್ಟಿರಿಯಾಗಳ ತವರಾಗಿ ಪರಿವರ್ತನೆಯಾಗಿ ಹಲ್ಲಿನ ಸೋಂಕಿಗೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. 
 
ಬಿರುಸಿನ ಬ್ರಷ್ಷಿಂಗ್: ಬಿರುಸಾಗಿ ಬ್ರಷ್ ಮಾಡುವುದರಿಂದ ಬ್ಯಾಕ್ಟಿರಿಯಾ ನಾಶವಾಗುತ್ತವೆ ಮತ್ತು ಕಲೆಗಳು ಮಾಯವಾಗುತ್ತವೆ. ಆದರೆ ಇದು ನಿಮ್ಮ  ವಸಡು ಮತ್ತು ದಂತಕವಚಕ್ಕೆ ಹಾನಿಯನ್ನುಂಟು ಮಾಡುತ್ತದೆ. ವಸಡುಗಳ ನಾಶವಾಗಿ ಹಲ್ಲಿನ ಬೇರುಗಳು ಕಾಣುವಂತೆ ಮಾಡುತ್ತದೆ. 
 
ಅತಿಯಾದ ಸಕ್ಕರೆ ಸೇವನೆ: ಅತಿಯಾದ ಸಕ್ಕರೆ ಸೇವನೆ ಹಲ್ಲು ಮತ್ತು ವಸಡುಗಳ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ. ಇದರಿಂದ ಸೃಷ್ಟಿಸುವ ಬ್ಯಾಕ್ಟಿರಿಯಾ ಉತ್ಪಾದಿಸುವ ಆ್ಯಸಿಡ್ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. 
 
ತಂಬಾಕು: ದಂತಕ್ಷಯಕ್ಕೆ ಬಹುದೊಡ್ಡ ಕಾಣ ತಂಬಾಕು ಸೇವನೆ. ಇದು ವಸಡುಗಳಿಗೆ ರಕ್ತ ಪೂರೈಕೆಯಾಗುವುದನ್ನು ತಡೆಯುತ್ತದೆ ಮತ್ತು ಇದರ ಅತಿಯಾದ ಬಳಕೆ ಬಾಯಿಯ ಕಾನ್ಸರ್‌ಗೆ ಸಹ ಕಾರಣವಾಗಬಲ್ಲದು. 
 

Share this Story:

Follow Webdunia kannada

ಮುಂದಿನ ಸುದ್ದಿ

ಟೊಮೆಟೊ ತೊಕ್ಕು ಮಾಡಿ ವಿಟಮಿನ್ ಹೊಟ್ಟೆಗಿಳಿಸಿ