Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒತ್ತಡಕ್ಕೆ ಹೇಳಿ ವಿದಾಯ

ಒತ್ತಡಕ್ಕೆ ಹೇಳಿ ವಿದಾಯ
, ಮಂಗಳವಾರ, 21 ಫೆಬ್ರವರಿ 2017 (13:57 IST)
ಬೆಂಗಳೂರು: ಈಗೀನ ಸ್ಪೀಡ್ ದುನಿಯಾದಲ್ಲಿ ಯಾರಿಗೆ ಯಾವಾಗ ಏನೆನಾಗುತ್ತೋ ಗೊತ್ತೆ ಆಗಲ್ಲ. ಜಂಕ್ ಫುಡ್, ಪೊಲ್ಯುಷನ್, ಟ್ರಾಫಿಕ್ ಕಿರಿಕಿರಿ, ನೂರಾಯಂಟು ರೋಗ.. ಅಬ್ಬಾ ಇವನ್ನೆಲ್ಲ ಮ್ಯಾನೇಜ್ ಮಾಡೋದ್ರಲ್ಲಿ ಸಾಕ್ ಸಾಕಾಗುತ್ತೆ.. ಹಾಗಾದ್ರೆ ಈ ಸ್ಟ್ರೇಸ್ ಜೀವನದಿಂದ ಮುಕ್ತಿ ಬೇಕಾದ್ರೆ ಇವುಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಿ ಸಾಕು.

1. ನಿತ್ಯ 7 ಗಂಟೆ ನಿದ್ದೆ
ಈಗೀನ ಮಂದಿಗೆ ಕಣ್ತುಂಬ ನಿದ್ದೆ ಅಂದ್ರೆನೇ ಗೊತ್ತಾಗಲ್ಲ. ಯಾಕಂದ್ರೆ ಮಲಗೋದು ರಾತ್ರಿ 3 ಗಂಟೆಯಾದ್ರು ಮತ್ತೆ ಬೇಗ ಎದ್ದು ಆಫೀಸ್, ಕೋರ್ಟ್ ಕಚೇರಿ ಅಂತ ಬ್ಯುಸಿಯಾಗಿ ಬಿಡ್ತಾರೆ. ಅದರ ಜೊತೆ ಜೊತೆಗೆ ನಿತ್ಯ ಕನಿಷ್ಟ ಪಕ್ಷ 7 ಗಂಟೆನಾದ್ರೂ ನಿದ್ದೆ ಮಾಡಿದ್ರೆ ದೇಹಕ್ಕೂ ಒಳ್ಳೆದು, ಕೆಲಸ ಮಾಡೋ ಪರಿಸರವೂ ಚೆನ್ನಾಗಿರುತ್ತೆ.
 
2. ಕಡಿಮೆ ಉಪ್ಪು ಬಳಸಿ
ನಿತ್ಯ ಆರೋಗ್ಯದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇದ್ದಷ್ಟು ಒಳಿತು. ಯಾಕಂದ್ರೆ ಉಪ್ಪಲ್ಲಿ ಸೋಡಿಯಂ ಕಂಟೆಂಟ್ ಜಾಸ್ತಿ ಇರೋದ್ರಿಂದ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ. ಸೋ ಇನ್ಮೇಲಿಂದ ಉಪ್ಪನ್ನ ಸ್ವಲ್ಪ ಸ್ವಲ್ಪ ನೆಗ್ಲೆಟ್ ಮಾಡಿ. 
 
3.ನಿತ್ಯ ಯೋಗ ವ್ಯಾಯಾಮ
ನಿತ್ಯ ಯೋಗ ವ್ಯಾಯಾಮ ಮಾಡಿದ್ರೆ, ಬೋರ್ನೆಸ್ ದೂರವಾಗುತ್ತೆ. ದಿನವಿಡಿ ಲವಲವಿಕೆಯಿಂದಿರಲು ಯೋಗ ಸಹಾಯಮಾಡುತ್ತೆ. ಜೊತೆಗೆ ಆರೋಗ್ಯ ವೃದ್ಧಿಯಾಗಿ ದೀರ್ಘಾಯುಷಿಗಳಾಗಲು ಸಹಾಯವಾಗುತ್ತೆ. 
 
4. 10 ನಿಮಿಷ ಧ್ಯಾನಕ್ಕೆ ಮೀಸಲಿಡಿ
ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ, ಅದೆಷ್ಟೋ ರೋಗಗಳನ್ನು ತಡೆಯಲು ಸಹಕಾರಿಯಂತೆ. ಹೀಗಿರುವಾಗ, ನಿಮ್ಮ ಒತ್ತಡದ ಜೀವನವನ್ನು ಸ್ವಲ್ಪ ಹಗುರಾಗಿಸಿಕೊಳ್ಳಲು  ದಿನಕ್ಕೆ 10 ನಿಮಿಷ ಧ್ಯಾನ ಮಾಡಿ.
 
5. ಹಣ್ಣು ತರಕಾರಿ ಯಥೇಚ್ಛವಾಗಿ ಬಳಸಿ
ನಿಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣಿ ಮಾಡಿಕೊಳ್ಳಬೇಕು. ಹೆಚ್ಚೆಚ್ಚು ತರಕಾರಿ, ಹಣ್ಣು ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ. ಜಂಕ್ ಫುಡ್ ತಿನ್ನೋದನ್ನ ಬಿಟ್ರೆ ತುಂಬಾ ಒಳ್ಳೆದು.  
 
6. ತೂಕ ಕಡಿಮೆ ಇರಲಿ
ಮುಖ್ಯವಾಗಿ ನಿಮ್ಮ ದೇಹದ ತೂಕದ ಮೇಲೆ ನಿಮಗೆ ನಿಯಂತ್ರಣವಿರಲಿ. ಕಡಿಮೆ ಇದಷ್ಟು, ನಿಮ್ಮ ದೇಹ ಚುರುಕಾಗಿ ಕೆಲಸ ಮಾಡಲಿದೆ. ಜೊತೆಗೆ ಲವಲವಿಕೆಯಿಂದ ಇರಲು ಸಾಧ್ಯ. 
 

Share this Story:

Follow Webdunia kannada

ಮುಂದಿನ ಸುದ್ದಿ

ಹಳದಿಗಟ್ಟಿದ ಹಲ್ಲನ್ನು 3 ನಿಮಿಷದಲ್ಲಿ ಬೆಳ್ಳಗಾಗಿಸಿ (ವಿಡಿಯೋ)